ಹೈದರಾಬಾದ್: ‘ನಿಮ್ಮ ಖಾತೆಯಲ್ಲಿ ಅನಧಿಕೃತವಾಗಿ ವಹಿವಾಟು ನಡೆಸಲಾಗುತ್ತಿದೆ. ಇದನ್ನು ತಡೆಯಲು ನಿಮ್ಮ ಹಣವನ್ನೆಲ್ಲಾ ಈ ‘ಸುರಕ್ಷಿತ ಖಾತೆ’ಗೆ ವರ್ಗಾಯಿಸಿ. ಇಲ್ಲವೆ ನಿಮ್ಮ ಬ್ಯಾಂಕ್ ವಿವರಗಳನ್ನು ನೀಡಿ ನಾವು ಅಕ್ರಮವನ್ನು ತಡೆಯುತ್ತೇವೆ’ ಎಂದು ಹೇಳಿಕೊಂಡು ಸೈಬರ್ ವಂಚನೆ ನಡೆಸುತ್ತಿದ್ದವರನ್ನು ತೆಲಂಗಾಣ ಸೈಬರ್ ಭದ್ರತಾ ಬ್ಯೂರೊ (ಟಿಜಿಸಿಎಸ್ಬಿ) ಬಂಧಿಸಿದೆ.

‘ಎಕ್ಸಿಟೊ ಸೊಲ್ಯೂಷನ್ಸ್’ ಎನ್ನುವ ಹೈದರಾಬಾದ್ನ ಕಂಪನಿಯು ಈ ಅಪರಾಧಗಳನ್ನು ಎಸಗುತ್ತಿತ್ತು. ತಮ್ಮ ಮೂಲಗಳು ಒದಗಿಸಿದ ಮಾಹಿತಿ ಮೇರೆಗೆ ತೆಲಂಗಾಣ ಸೈಬರ್ ಪೊಲೀಸರು ಬುಧವಾರ ರಾತ್ರಿ ಈ ಕಂಪನಿಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 63 ಮಂದಿಯನ್ನು ಬಂಧಿಸಲಾಗಿದೆ.

‘ಅಮೆರಿಕದಲ್ಲಿ ವಾಸಿಸುತ್ತಿರುವವರು ಮತ್ತು ‘ಪೇಪಾಲ್’ ಎನ್ನುವ ಆನ್ಲೈನ್ ಹಣಕಾಸು ವಹಿವಾಟು ವೇದಿಕೆ ಬಳಕೆದಾರರು ಈ ಅಪರಾಧಿಗಳ ಮುಖ್ಯ ಗುರಿಯಾಗಿದ್ದಾರೆ. ಈಶಾನ್ಯ ರಾಜ್ಯದವರೇ ಇಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಮಾಡಲಾಗಿದೆ’ ಎಂದು ಟಿಜಿಸಿಎಸ್ಬಿ ನಿರ್ದೇಶಕ ಶಿಖಾ ಗೋಯಲ್ ಗುರುವಾರ ಮಾಹಿತಿ ನೀಡಿದರು.

‘ಕಾಲ್ ಸೆಂಟರ್ ಹೆಸರಿನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ತಿಂಗಳಿಗೆ ₹ 30 ಸಾವಿರ ಕೊಡುವುದಾಗಿ ಹೇಳಲಾಗಿದೆ. ಹೈದರಾಬಾದ್ಗೆ ಬಂದ ಮೇಲೆ ಫೇಕ್ಕಾಲ್ ಮಾಡುವುದು ಹೇಗೆ ಎನ್ನುವ ಕುರಿತು ಈ ಎಲ್ಲರಿಗೂ ತರಬೇತಿ ನೀಡಲಾಗಿದೆ. ಬಂಧಿತರಿಂದ 52 ಮೊಬೈಲ್, 63 ಲ್ಯಾಪ್ಟಾಪ್, ಕಂಪನಿಯ 27 ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.