ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆ 5 ಗಂಟೆವರೆಗೆ ಛತ್ತೀಸಗಢದಲ್ಲಿ ಶೇ 67, ಮಧ್ಯಪ್ರದೇಶದಲ್ಲಿ ಶೇ 71ರಷ್ಟು ಮತದಾನ

Published 17 ನವೆಂಬರ್ 2023, 13:17 IST
Last Updated 17 ನವೆಂಬರ್ 2023, 13:17 IST
ಅಕ್ಷರ ಗಾತ್ರ

ನವದೆಹಲಿ: ಇಂದು ವಿಧಾನಸಭೆ ಚುನಾವಣೆ ನಡೆದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸಂಜೆ 5 ಗಂಟೆಯವರೆಗಿನ ತಾತ್ಕಾಲಿಕ ಅಂಕಿಅಂಶದ ಪ್ರಕಾರ ಕ್ರಮವಾಗಿ ಶೇಕಡ 67.34 ಮತ್ತು ಶೇಕಡ 71.11ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ (ಇಸಿ) ಶುಕ್ರವಾರ ತಿಳಿಸಿದೆ.

ಮತಗಟ್ಟೆಗಳ ಅಂತಿಮ ವರದಿ ಬಂದ ಬಳಿಕ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತದಾನದ ಅವಧಿ ಮುಗಿಯುವವರೆಗೆ ಮತಗಟ್ಟೆಗಳನ್ನು ತಲುಪುವ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಮತದಾನಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶಗಳು ಶನಿವಾರದೊಳಗೆ ತಿಳಿಯಲಿವೆ ಎಂದು ಇಸಿ ತಿಳಿಸಿದೆ.

ಛತ್ತೀಸ್‌ಗಢದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT