ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ ಬ್ರಿಡ್ಜ್‌ ಬಳಿ ದಾಳಿ ನಡೆಸಿದ ಉಗ್ರನಿಗೆ ಇತ್ತು ಪಾಕಿಸ್ತಾನದ ನಂಟು

Last Updated 30 ನವೆಂಬರ್ 2019, 10:22 IST
ಅಕ್ಷರ ಗಾತ್ರ

ಲಂಡನ್: ಇಲ್ಲಿನ ಜಗತ್ಪ್ರಸಿದ್ದ ಥೇಮ್ಸ್‌ ಬ್ರಿಡ್ಜ್‌ ಬಳಿ ಶುಕ್ರವಾರ ದಾಳಿ ನಡೆಸಿ, ಪೊಲೀಸರಿಂದ ಹತನಾದ ಭಯೋತ್ಪದಕ ಉಸ್ಮಾನ್‌ ಖಾನ್‌ ತನ್ನ ಹರೆಯವನ್ನು ಪಾಕಿಸ್ತಾನದಲ್ಲಿ ಕಳೆದಿದ್ದ ಎಂದು ತಿಳಿದುಬಂದಿದೆ. ಅಲ್‌–ಖೈದಾ ಉಗ್ರ ಸಂಘಟನೆಯ ವಿಚಾರಧಾರೆಗಳಿಗೆ ಆಕರ್ಷಿತನಾಗಿದ್ದ 28 ವರ್ಷದ ಆತ, ಈ ಹಿಂದೆ ನಡೆದ ಹಲವು ಭಯೋತ್ಪದಕ ಕೃತ್ಯಗಳಲ್ಲಿ ಭಾಗಿಯಾಗಿದ್ದನೆಂದು ‘ದಿ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ.

ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಉಸ್ಮಾನ್‌ ಖಾನ್‌ ಆ ಸಂಬಂಧಎಂಟು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದನು.ಡಿಸೆಂಬರ್‌ 2018 ರಲ್ಲಿ ಪೆರೋಲ್‌ ಮೇಲೆ ಹೊರ ಬಂದು,ಲಂಡನ್‌ ಷೇರು ಮಾರುಕಟ್ಟೆ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದನೆಂದು ತಿಳಿದುಬಂದಿದೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಯೋಜನೆ ರೂಪಿಸುವ ಮತ್ತು ದುಡ್ಡು ಹೊಂದಿಸುವ ಪ್ರಕರಣದಲ್ಲಿ ಉಸ್ಮಾನ್‌ ಖಾನ್‌ಗೆ 16 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಈತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಾಧೀಶರು, ‘ಉಸ್ಮಾನ್‌ ಖಾನ್‌ ಒಬ್ಬ ಅಪಾಯಕಾರಿ ಉಗ್ರನಾಗಿದ್ದು, ಆತನನ್ನು ಹೊರಬಿಟ್ಟರೆ ಮತ್ತಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಬಹುದು,’ ಎಂದು ಎಚ್ಚರಿಕೆ ನೀಡಿದ್ದರು.

ತನ್ನ ಹರೆಯದ ಕೆಲ ವರ್ಷಗಳನ್ನು ಪಾಕಿಸ್ತಾನದಲ್ಲಿ ಕಳೆದಿದ್ದ ಉಸ್ಮಾನ್‌ ಖಾನ್‌ ಯಾವುದೇ ವಿದ್ಯಾಭ್ಯಾಸ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ.

ಶುಕ್ರವಾರ ಲಂಡನ್‌ ಬ್ರಿಡ್ಜ್‌ ಬಳಿ ಇಬ್ಬರನ್ನು ಇರಿದು ಕೊಲೆ ಮಾಡಿ, ಹಲವರಿಗೆ ಗಾಯಗೊಳಿಸಿದ್ದ ಉಸ್ಮಾನ್‌ ಆ ನಂತರ ಪೊಲೀಸರಿಂದ ಹತನಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT