ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿಮಾನದಲ್ಲಿ ಈಜುಕೊಳವನ್ನು ಹೊಂದಿದ್ದಾರೆ. ದೇಶದಿಂದ ದೇಶಕ್ಕೆ ಹೋಗುವಾಗ ಅದರಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

ಮುರ್ಶಿದಾಬಾದ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಚೌಧರಿ ಅವರು ರಾಹುಲ್ ಗಾಂಧಿ ನೇಪಾಳ ನೈಟ್ ಕ್ಲಬ್ನಲ್ಲಿ ಕಾಣಿಸಿಕೊಂಡಿದ್ದ ಪ್ರಶ್ನೆಯೊಂದಕ್ಕೆ ಮೋದಿಯವರನ್ನು ಎಳೆ ತಂದಿದ್ದಾರೆ.

‘ಸುಮಾರು ₹13 ಸಾವಿರ ಕೋಟಿ ಮೌಲ್ಯದ ಎರಡು ವಿಮಾನಗಳಲ್ಲಿ ಮೋದಿ ಅವರು ಐಷಾರಾಮಿ ಈಜುಕೊಳವನ್ನು ಹೊಂದಿದ್ದಾರೆ. ಮೊದಲು ಬಿಜೆಪಿಯವರು ಇದರ ಬಗ್ಗೆ ತಿಳಿದುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ ಎಂದಿದ್ದಾರೆ.

‘ರಾಹುಲ್ ಗಾಂಧಿ ಅವರು ಬಿಜೆಪಿ ನಾಯಕರ ಎಲ್ಲ ಆರೋಪ, ವಾದಗಳಿಗೆ ಉತ್ತರ ನೀಡುತ್ತಾರೆ. ಆದರೆ, ಮೋದಿ ಅವರು ಎಂದಾದರೂ ರಾಹುಲ್ ಅವರ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರಾ?‘ ಎಂದು ಚೌಧರಿ ಪ್ರಶ್ನಿಸಿದ್ದಾರೆ.

‘ರಾಹುಲ್ ಗಾಂಧಿ ಅವರು ನೇಪಾಳಕ್ಕೆ ತಮ್ಮ ಸ್ನೇಹಿತರೊಬ್ಬರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಅವರು ಇದಕ್ಕೆ ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಹೋಗಿದ್ದರು. ನೇಪಾಳವೇನು ಹೋಗಬಾರದ ದೇಶವಲ್ಲವಲ್ಲ’ ಎಂದು ಅವರು ಹೇಳಿರುವುದಾಗಿ ಆಜ್ ತಕ್.ಇನ್ ವೆಬ್ಸೈಟ್ ವರದಿ ಮಾಡಿದೆ.

‘ಓ ಮೈ ಗಾಡ್...’ ಪತ್ರಕರ್ತರಿಗೆ ಮೋದಿ ಪ್ರತಿಕ್ರಿಯಿಸಿದ ವಿಡಿಯೊ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.