ಚಂಡೀಗಢ(ಪಿಟಿಐ): ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮೂವರು ಸಚಿವರು ರೈತ ಮುಖಂಡರ ಜೊತೆ ಚಂಡೀಗಢದಲ್ಲಿ ಗುರುವಾರ ಮಾತುಕತೆ ನಡೆಸಲಿದ್ದಾರೆ.
ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪೀಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರ ಜೊತೆ ಮಾತುಕತೆ ಸಂಜೆ 5ಕ್ಕೆ ನಿಗದಿಯಾಗಿದೆ ಎಂದು ರೈತ ಮುಖಂಡ ಸರವಣ್ ಸಿಂಗ್ ಪಂಡೇರ್ ತಿಳಿಸಿದ್ದಾರೆ.
ಇದು ರೈತರ ಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವಿನ ಮೂರನೆಯ ಸಭೆ ಆಗಲಿದೆ. ಈ ಮೊದಲು ನಡೆದಿದ್ದ ಎರಡು ಸಭೆಗಳು ಯಾವುದೇ ತೀರ್ಮಾನಕ್ಕೆ ಬರಲು ವಿಫಲವಾಗಿದ್ದವು.