ಚಂಡೀಗಢ: ಈ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಿರಿ. ಇದು ದುಷ್ಟತನ ಅನ್ಯಾಯ ಅಸತ್ಯ ವಿರುದ್ಧದ ಹೋರಾಟ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಕರೆ ನೀಡಿದರು.
ಜುಲಾನಾದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ಆಡಳಿತಾರೂಢ ಪಕ್ಷವು ಪ್ರತಿ ಹಂತದಲ್ಲಿಯೂ ಜನರಿಗೆ ದ್ರೋಹ ಬಗೆದಿದೆ’ ಎಂದು ಹೇಳಿದರು.
‘ನರೇಂದ್ರ ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ವಿಫಲವಾಗಿದೆ. ಅದು ಎಲ್ಲವನ್ನೂ ಅಂಬಾನಿ ಮತ್ತು ಅದಾನಿಗೆ ನೀಡುತ್ತಿದೆ’ ಎಂದು ಆರೋಪಿಸಿದರು.
‘ಅಗ್ನಿವೀರರಿಗೆ ಪಿಂಚಣಿ ಸೌಲಭ್ಯ ಇಲ್ಲ. ನಾಲ್ಕು ವರ್ಷ ಸೇವೆ ನಂತರ ಮತ್ತೆ ಅವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸಬೇಕು’ ಎಂದು ಹೇಳಿದರು.