ನವದೆಹಲಿ:‘ಬಿಜೆಪಿ ತೊರೆದುಕಾಂಗ್ರೆಸ್ ಸೇರಿದ ಮುಖಂಡರ ವಿರುದ್ಧ ಹರಿಹಾಯ್ದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ‘ಶೀಘ್ರದಲ್ಲಿ ಅವರೆಲ್ಲ ಅತ್ಯಂತ ಹಳೆ ಪಕ್ಷದಿಂದ ವಂಚನೆಗೆ ಒಳಗಾಗಲಿದ್ದು, #MeToo ಅಭಿಯಾನ ಪ್ರಾರಂಭಿಸುತ್ತಾರೆ’ ಎಂದು ಹೇಳಿದರು.

‘ಒಂದು ವೇಳೆ ಎಲ್ಲಾ ವಿರೋಧ ಪಕ್ಷಗಳು ಒಂದಾದರೆ,ಈಗ ಕಾಂಗ್ರೆಸ್ ಸೇರಿರುವವರನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ.ಕಾಂಗ್ರೆಸ್‌ನಿಂದ ದ್ರೋಹ ಅನುಭವಿಸಿದ ನಂತರ, ಅವರೆಲ್ಲಒಟ್ಟಾಗಿ #MeToo ಅಭಿಯಾನನಡೆಸುವ ಸ್ಥಿತಿ ಬರುತ್ತದೆ’ ಎಂದರು.

ಇತ್ತೀಚೆಗೆ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಗ್ ಮತ್ತು ಮಹಾರಾಷ್ಟ್ರ ಬಿಜೆಪಿ ಮಾಜಿ ಶಾಸಕ ಆಶಿಶ್ ದೇಶ್‌ಮುಖ್ ಕಾಂಗ್ರೆಸ್ ಪಕ್ಷ ಸೇರಿದ್ದರು. ಈ ಇಬ್ಬರು ರಫೇಲ್ ಹಗರಣದ ಕಾರಣ ನೀಡಿ ಬಿಜೆಪಿ ತೊರೆದಿದ್ದರು.

ಎಲ್ಲಾ ಕ್ಷೇತ್ರಗಳಲ್ಲಿನ ಮಹಿಳೆಯರು ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನದ ಮೂಲಕಧೈರ್ಯವಾಗಿ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಎಂ.ಜೆ. ಅಕ್ಬರ್ ಅವರೂ ಲೈಂಗಿಕಕಿರುಕುಳದ ಆರೋಪದಿಂದ ಸಚಿವ ಸ್ಥಾನ ತೊರೆಯಬೇಕಾಯಿತು.

ಆಶ್ಚರ್ಯಕರ ಸಂಗತಿ ಎಂದರೆ, #MeToo ಪ್ರಕರಣಗಳನ್ನುಇತ್ಯರ್ಥಗೊಳಿಸುವುದಕ್ಕೆ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ಇದೆಯೇ ಎಂಬ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಗೃಹಸಚಿವರ ನೇತೃತ್ವದಲ್ಲಿ ಸಚಿವರ ಸಮಿತಿಯೊಂದನ್ನು ರಚಿಸಿದೆ. ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಮನೇಕಾ ಗಾಂಧಿ ಅವರೂ ಸಮಿತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.