ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಕಾಲಿಗೆ ಬಿದ್ದು ಕ್ಷಮೆ ಕೋರಿದ ಪ್ರಾಧ್ಯಾಪಕ

Last Updated 1 ಅಕ್ಟೋಬರ್ 2018, 18:17 IST
ಅಕ್ಷರ ಗಾತ್ರ

ಮಂಡ್ಸೌರ್‌: ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳ ಕಾಲಿಗೆ ಬಿದ್ದು ಕ್ಷಮೆ ಕೋರಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿದ್ಯಾರ್ಥಿಗಳು ಎಬಿವಿಪಿ ಕಾರ್ಯಕರ್ತರು.ಪ್ರಾಧ್ಯಾಪಕ ದಿನೇಶ್‌ ಗುಪ್ತಾ ತರಗತಿ ಪ್ರವೇಶಿಸಿದಾಗ ವಿದ್ಯಾರ್ಥಿಗಳು‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಿದ್ದರು. ತರಗತಿಗೆ ತೊಂದರೆ ಮಾಡದಂತೆ ದಿನೇಶ್‌ ಹೇಳಿದರು.‘ದೇಶ ಭಕ್ತಿಯ’ ಘೋಷಣೆ ಕೂಗಲು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪೊಲೀಸರಿಗೆ ದೂರು ನೀಡುವುದಾಗಿ ವಿದ್ಯಾರ್ಥಿಗಳು ಬೆದರಿಕೆ ಹಾಕಿದರು. ಬೆದರಿದ ಪ್ರಾಧ್ಯಾಪಕ ವಿದ್ಯಾರ್ಥಿಗಳ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

‘ಪ್ರಾಧ್ಯಾಪಕರು ನಾಟಕ ಮಾಡುತ್ತಿದ್ದಾರೆ. ಬಿಎಸ್ಸಿ ಮೂರನೇ ಸೆಮಿಸ್ಟರ್‌ ಫಲಿತಾಂಶ ವಿಳಂಬವಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ‘ಭಾರತ್‌ ಮಾತಾ ಕಿ ಜೈ’ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ತರಗತಿ ಪ್ರವೇಶಿಸಿದ ಪ್ರಾಧ್ಯಾಪಕ ಘೋಷಣೆ ಕೂಗುವುದನ್ನು ಆಕ್ಷೇಪಿಸಿ ಹೊರಗೆ ನಡೆದರು.ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸುತ್ತಿದ್ದಂತೆ ಪ್ರಾಧ್ಯಾಪಕ ಕಾಲಿಗೆ ಬಿದ್ದರು’ ಎಂದು ಎಪಿವಿಪಿ ಜಿಲ್ಲಾಸಂಚಾಲಕ ಪವನ್ ಶರ್ಮಾ ಹೇಳಿದ್ದಾರೆ.

‘ನಮ್ಮ ದೇಶದಲ್ಲಿ ಶಿಕ್ಷಕರನ್ನು ದೇವರು ಎಂದೇ ಭಾವಿಸಲಾಗುತ್ತದೆ. ಆದರೆ, ಆಡಳಿತಾರೂಢ ಪಕ್ಷಕ್ಕೆ ಸೇರಿದ ವಿದ್ಯಾರ್ಥಿಗಳು ಶಿಕ್ಷಕರನ್ನು ಅವಮಾನಿಸಿದ್ದಾರೆ. ಇದು ಯಾವ ಬಗೆಯ ಸಂಸ್ಕೃತಿ? ವಿದ್ಯಾರ್ಥಿಗಳು ಶಿಕ್ಷಕನಿಗೆ ಬೆದರಿಸಿದರೆ, ಶಿಕ್ಷಕ ವಿದ್ಯಾರ್ಥಿಗಳ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ’ ಎಂದು ಘಟನೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT