ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್‌ಮಿನರ್‌ ಎಕ್ಸ್‌ಪ್ರೆಸ್‌ | ಹಳಿ ತಪ್ಪಿದ 3 ಬೋಗಿಗಳು: 6 ಮಂದಿಗೆ ಗಾಯ

Published 10 ಜನವರಿ 2024, 14:12 IST
Last Updated 10 ಜನವರಿ 2024, 14:12 IST
ಅಕ್ಷರ ಗಾತ್ರ

ಹೈದರಾಬಾದ್: ಚೆನ್ನೈ–ಹೈದರಾಬಾದ್‌ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲಿನ 3 ಬೋಗಿಗಳು ಹಳಿ ತಪ್ಪಿ, ಆರು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹೈದರಾಬಾದ್‌ನ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಬುಧವಾರ ನಡೆಯಿತು.

‘ನಿಲ್ದಾಣದ ಕಡೆ ನಿಧಾನವಾಗಿ ಬರುತ್ತಿದ್ದ ರೈಲಿನ 3 ಬೋಗಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಗಾಯಗೊಂಡಿರುವ 6 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ದಕ್ಷಿ‌ಣ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲು ಮಂಗಳವಾರ ಸಂಜೆ ಚೆನ್ನೈನಿಂದ ಹೊರಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT