ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ | ನಿಂತಿದ್ದ ಟ್ರಕ್‌ಗೆ ಪೊಲೀಸ್ ಬಸ್‌ ಡಿಕ್ಕಿ, ಮೂವರು ಸಿಬ್ಬಂದಿ ಸಾವು

Published 17 ಜನವರಿ 2024, 6:19 IST
Last Updated 17 ಜನವರಿ 2024, 6:19 IST
ಅಕ್ಷರ ಗಾತ್ರ

ಹೋಶಿಯಾರಪುರ(ಪಂಜಾಬ್‌)‌: ಪೊಲೀಸ್‌ ಸಿಬ್ಬಂದಿಯಿದ್ದ ಬಸ್ಸೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 13 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

30 ಪೊಲೀಸರನ್ನು ಹೊತ್ತ ಬಸ್ ಜಲಂಧರ್‌ನಲ್ಲಿರುವ ಪಂಜಾಬ್ ಸಶಸ್ತ್ರ ಪೊಲೀಸ್ ಸಂಸ್ಥೆ ಕಡೆಯಿಂದ ಗುರುದಾಸ್‌ಪುರಕ್ಕೆ ಹೋಗುತ್ತಿದ್ದ ವೇಳೆ ಮುಂಜಾನೆ 7 ಗಂಟೆಯ ಸುಮಾರಿಗೆ ಮುಕೇರಿಯದ ಬಳಿ ಅಘಘಾತ ಸಂಭವಿಸಿದೆ. ದಟ್ಟ ಮಂಜು ಕವಿದಿದ್ದ ಕಾರಣ ಟ್ರಕ್‌ ನಿಂತಿರುವುದು ಚಾಲಕನಿಗೆ ಗೋಚರಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹರ್ದೇವ್ ಸಿಂಗ್, ಹಿರಿಯ ಕಾನ್‌ಸ್ಟೆಬಲ್ ಗುರುಪ್ರೀತ್ ಸಿಂಗ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಶಾಲು ರಾಣಾ ಎಂದು ಗುರುತಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹೋಶಿಯಾರಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಲಂಬಾ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಗಾಯಾಳುಗಳನ್ನು ದಾಸುಯಾ ಮತ್ತು ಮುಕೇರಿಯನ್‌ನ ಸಿವಿಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT