ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ | ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ 526–785ಕ್ಕೆ ಏರಿಕೆ: ಚೌಹಾಣ್

Published 29 ಜುಲೈ 2023, 13:18 IST
Last Updated 29 ಜುಲೈ 2023, 13:18 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದಲ್ಲಿ 2018ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಹುಲಿ ದಿನದಂದು ರಾಜ್ಯದ ಜನರಿಗೆ ಚೌಹಾಣ್‌ ಶುಭಾಶಯ ಕೋರಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆ ಮಾಡಿರುವ ‘ಹುಲಿಗಳ ಸ್ಥಿತಿ: ಕೋ–ಪ್ರೆಡೇಟರ್ಸ್‌ ಮತ್ತು ಪ್ರೇ ಇನ್‌ ಇಂಡಿಯಾ–2022’ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಕರ್ನಾಟಕ 563 ಮತ್ತು ಉತ್ತರಾಖಂಡ 560 ಹುಲಿಗಳನ್ನು ಹೊಂದುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದ ಅರಣ್ಯಗಳಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ 259 ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮ ರಾಜ್ಯದ ಜನರ ಸಹಕಾರ ಮತ್ತು ಅರಣ್ಯ ಇಲಾಖೆಯ ಅವಿರತ ಪ್ರಯತ್ನದ ಫಲವಾಗಿ ನಾಲ್ಕು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526 ರಿಂದ 785 ಏರಿಕೆ ಕಂಡಿರುವುದು ಸಂತಸದ ವಿಷಯ ಎಂದು ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ.

ಈ ಯಶಸ್ಸಿಗೆ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ ಚೌಹಾಣ್‌, ಅಂತರರಾಷ್ಟ್ರೀಯ ಹುಲಿ ದಿನಾಚರಣೆಯಂದು ನಾವೆಲ್ಲರೂ ಒಟ್ಟಾಗಿ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡೋಣ ಎಂದರು. ಮಧ್ಯಪ್ರದೇಶದಲ್ಲಿ 2006 ರಲ್ಲಿ ಹುಲಿಗಳ ಸಂಖ್ಯೆ 300 ಆಗಿತ್ತು. ಆದರೆ 2010 ರ ವೇಳೆಗೆ ಹುಲಿಗಳ ಸಂಖ್ಯೆ 257ಕ್ಕೆ ಕುಸಿಯಿತು. ಅದೇ ವೇಳೆ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 300 ಇದ್ದಿದ್ದರಿಂದ ಮಧ್ಯಪ್ರದೇಶ ಮೊದಲ ಸ್ಥಾನ ಕಳೆದುಕೊಂಡಿತು ಎಂದು ಚೌಹಾಣ್‌ ಹೇಳಿದರು.

ಮಧ್ಯಪ್ರದೇಶದ ಕನ್ಹಾ, ಬಾಂಧವಗಢ, ಪನ್ನಾ, ಪೆಂಚ್‌, ಸಾತ್ಪುರ ಮತ್ತು ಸಂಜಯ್‌–ದುಬ್ರಿ ಸೇರಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT