ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ತೀವ್ರವಾಗಿ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ಕ್ರಮಕ್ಕೆ ಹಲವರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಆಯೋಗದ ಆದೇಶ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ಜೂನ್ 24ರಂದು ಆಯೋಗ ಹೊರಡಿಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಆದೇಶ ಸಂವಿಧಾನದ 14, 19(1)(ಎ), 21, 325, 328ರ ವಿಧಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ–1950, ಮತದಾರ ನೋಂದಣಿ ನಿಯಮ–1960ರ ಉಲ್ಲಂಘನೆಯಾಗಿದೆ. ಹೀಗಾಗಿ ಆದೇಶವನ್ನು ವಜಾ ಮಾಡುವಂತೆ ಸಾರ್ವಜನಿಕ ಹಿತಾಸಕ್ತಿಯಡಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಮಹುವಾ ಕೋರಿದ್ದಾರೆ.

‘ಈಗಾಗಲೇ ಪಟ್ಟಿಯಲ್ಲಿ ಹೆಸರಿರುವ, ಹಲವು ಬಾರಿ ಮತದಾನ ಮಾಡಿರುವವರನ್ನು ತಮ್ಮ ಅರ್ಹತೆ ಸಾಬೀತುಪಡಿಸುವಂತೆ ಸೂಚಿಸಲಾಗುತ್ತಿದೆ. ದಾಖಲೆ ನೀಡದವರನ್ನು ಪಟ್ಟಿಯಿಂದ ಕೈಬಿಡುವ ಅಪಾಯವಿದೆ. ಇತರೆ ರಾಜ್ಯಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡದಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಮಹುವಾ ಅವರಷ್ಟೇ ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳಾದ ಎಡಿಆರ್, ಪಿಯುಸಿಎಲ್, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್ ಸೇರಿ ಹಲವರು ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಇದು ಎಂದು ಎಡಿಆರ್ ಆತಂಕ ವ್ಯಕ್ತಪಡಿಸಿದೆ.

ಈ ಮಧ್ಯೆ ಜುಲೈ 9ರಂದು ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಸಂದರ್ಭದಲ್ಲಿ ಬಿಹಾರದಲ್ಲಿ ಈ ವಿಚಾರವನ್ನೂ ಮುಂದಿಡಲು ಇಂಡಿಯಾ ಒಕ್ಕೂಟದ ಪಕ್ಷಗಳು ನಿರ್ಧರಿಸಿವೆ.

ಬಿಹಾರ ವಿಧಾನಸಭೆಗೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಯಲ್ಲಿ ಆಯೋಗ ವಿಶೇಷ ಪರಿಷ್ಕರಣೆ ಆದೇಶ ಹೊರಡಿಸಿದೆ.

ಆದೇಶದಲ್ಲಿ ಬದಲಾವಣೆ ಇಲ್ಲ: ಆಯೋಗ

ಪಾಟ್ನಾ: ‘ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ತಳಮಟ್ಟದಿಂದ ಅತ್ಯಂತ ಸುಲಲಿತವಾಗಿ ನಡೆಸಲಾಗುವುದು. ನಾವು ನೀಡಿರುವ ಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗವು ಭಾನುವಾರ ಸ್ಪಷ್ಟಪಡಿಸಿದೆ. ಪರಿಷ್ಕರಣೆ ಸಂಬಂಧ ಆಯೋಗ ನೀಡಿದ್ದ ಜಾಹೀರಾತು ಪ್ರಸ್ತಾಪಿಸಿ ಕೆಲವರು ಗೊಂದಲ ಮೂಡಿಸಿದ್ದರು. ಹೀಗಾಗಿ ಹೇಳಿಕೆ ಬಿಡುಗಡೆ ಮಾಡಿರುವ ಆಯೋಗ ‘ಮತದಾರರು 2025ರ ಜುಲೈ 25ರ ಒಳಗೆ ದಾಖಲೆಗಳನ್ನು ಒದಗಿಸಬೇಕು. ಸಲ್ಲಿಸದವರಿಗೆ ಆಕ್ಷೇಪಣೆ ಮತ್ತು ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಕೆಲವರ ತಪ್ಪು ಮತ್ತು ಹಾದಿ ತಪ್ಪಿಸುವ ಹೇಳಿಕೆಗಳಿಂದ ಬಿಹಾರದ ಜನರು ಎಚ್ಚರವಾಗಿರಿ’ ಎಂದು ಮನವಿ ಮಾಡಿದೆ. 2003ರಲ್ಲೇ ದೇಶಾದ್ಯಂತ ಪರಿಷ್ಕರಣೆ ಆಗಿದ್ದರೂ ಬಿಹಾರಕ್ಕೆ ಮಾತ್ರ ಇದು ಅನ್ವಯವಾದುದು ಏಕೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಆಯೋಗ ಈ ರೀತಿ ಸ್ಪಷ್ಟನೆ ಕೊಟ್ಟಿದೆ. ಬಿಹಾರ ಮುಖ್ಯ ಚುನಾವಣಾಧಿಕಾರಿ(ಸಿಇಒ) ‘ಎಕ್ಸ್’ನಲ್ಲಿ ಸ್ಪಷ್ಟನೆ ನೀಡಿದ್ದು ‘ಆಯೋಗದ ಸೂಚನೆಯಂತೆ 2025ರ ಆಗಸ್ಟ್ 1ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುವುದು. ಅದರಲ್ಲಿ ಸಂಪೂರ್ಣ ಮಾಹಿತಿ ನಮೂನೆಗಳನ್ನು ಒದಗಿಸಿದ ಹಾಲಿ ಮತದಾರರ ಹೆಸರುಗಳು ಇರಲಿವೆ. ಆನಂತರವೂ ದಾಖಲೆ ಒದಗಿಸಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.