ಚೆನ್ನೈ: ಮೂರೂವರೆ ವರ್ಷದ ಬಾಲಕಿಯ ವರ್ತನೆಯು ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಕಾರಣ ಎಂದು ದೂಷಿಸಿರುವ ಆರೋಪದಡಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮಯಿಲಾಡುತುರೈ ಜಿಲ್ಲಾಧಿಕಾರಿ ಎ.ಪಿ. ಮಹಾಭಾರತಿ ಅವರನ್ನು ತಮಿಳುನಾಡು ಸರ್ಕಾರ ಎತ್ತಂಗಡಿ ಮಾಡಿದೆ.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹಾಭಾರತಿ ಅವರು, ‘ಮೂರೂವರೆ ವರ್ಷದ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನನಗೆ ಬಂದ ವರದಿಯ ಪ್ರಕಾರ, ದೌರ್ಜನ್ಯ ಎಸಗಿದವನ ಮುಖಕ್ಕೆ ಮಗು ಉಗುಳಿದೆ. ಅದೇ ದೌರ್ಜನ್ಯಕ್ಕೆ ಕಾರಣವಾಗಿರಬಹುದು. ಹಾಗಾಗಿ, ಪೋಕ್ಸೊ ಪ್ರಕರಣಗಳಲ್ಲಿ ಎರಡೂ ಕಡೆಯ ವಿಚಾರಗಳನ್ನು ಪರಿಗಣಿಸುವುದು ಮುಖ್ಯವಾಗಿದೆ’ ಎಂದು ಹೇಳಿದ್ದರು.

ಜಿಲ್ಲಾಧಿಕಾರಿ ನೀಡಿದ್ದ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ನೆಟ್ಟಿಗರು ಜಿಲ್ಲಾಧಿಕಾರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಅಸಂಬದ್ಧ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾದ ನಂತರ, ಅಧಿಕಾರಿಯನ್ನು ಮಯಿಲಾಡುತುರೈನಿಂದ ವರ್ಗಾಯಿಸಲಾಗಿದೆ. ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಮಯಿಲಾಡುತುರೈನಲ್ಲಿ ಮೂರೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 16 ವರ್ಷದ ಬಾಲಕ ಕಾನೂನು ಸಂಘರ್ಷಕ್ಕೆ ಸಿಲುಕಿದ ಆರೋಪಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.