ಚೆನ್ನೈ, ಪುಣೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಆರು ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ.
ತಮಿಳುನಾಡಿನ ಪೆರಂಬದೂರಿನಲ್ಲಿ ರೆಸಾರ್ಟ್‌ವೊಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡಲು ಇಳಿದಿದ್ದ ಕಾರ್ಮಿಕರಾದ ರಂಗನಾಥನ್, ನವೀನ್ ಕುಮಾರ್ ಮತ್ತು ತಿರುಮಲೈ ಎಂಬುವರು ವಿಷಾನಿಲ ಸೇವಿಸಿ ಸಾವಿಗೀಡಾಗಿದ್ದಾರೆ.ಘಟನೆ ಸಂಬಂಧ ಪೊಲೀಸರು ರೆಸಾರ್ಟ್ ಮಾಲೀಕ ಮತ್ತು ಗುತ್ತಿಗೆದಾರನನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪುಣೆಯಹೌಸಿಂಗ್ ಸೊಸೈಟಿಯೊಂದರಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಕಾರ್ಮಿಕರನ್ನು ಕರೆತಂದಿದ್ದ ಗುತ್ತಿಗೆದಾರನ ವಿರುದ್ಧಭಾರತೀಯ ದಂಡ ಸಂಹಿತೆ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.