ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ: ಟ್ರ್ಯಾಕ್ಟರ್‌ ಟ್ರಾಲಿ ಉರುಳಿ 13 ಮಂದಿ ಸಾವು

Published 3 ಜೂನ್ 2024, 16:14 IST
Last Updated 3 ಜೂನ್ 2024, 16:14 IST
ಅಕ್ಷರ ಗಾತ್ರ

ರಾಜಗಢ: ಟ್ರಾಕ್ಟರ್‌ ಟ್ರಾಲಿಯೊಂದು ಮಗುಚಿಬಿದ್ದು 13 ಜನರು ಮೃತಪಟ್ಟು, ಸುಮಾರು 20 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಪಿಪ್ಲೋಡಿಯಲ್ಲಿ ಭಾನುವಾರ ನಡೆದಿದೆ. ಚಾಲಕ ಮದ್ಯ ಸೇವಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮದುವೆ ಸಮಾರಂಭಕ್ಕೆ ಹೊರಟಿದ್ದ ಈ ಟ್ರ್ಯಾಕ್ಟರ್‌ನಲ್ಲಿ ಸುಮಾರು 35 ಜನರಿದ್ದರು. ಚಾಲಕನು ಸಂತ್ರಸ್ತರ ಸಂಬಂಧಿ. ರಾಜಸ್ಥಾನದಿಂದ ಟ್ರ್ಯಾಕ್ಟರ್‌ ಹೊರಡುವುಕ್ಕೂ ಮೊದಲು ಆತ ಮದ್ಯ ಸೇವಿಸಿದ್ದ ಎಂದು ಘಟನೆಯಲ್ಲಿ ಬದುಕಿಳಿದ ಮಹಿಳೆಯೊಬ್ಬರು ಹೇಳಿದ್ದಾರೆ. ಚಾಲಕನ ವಿರುದ್ಧ ದಂಡಾರ್ಹ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಐವರು ಮಹಿಳೆಯರು ಮತ್ತು ಹಲವು ಮಕ್ಕಳಿದ್ದಾರೆ. ಗಾಯಗೊಂಡಿರುವವರ ಪೈಕಿ 16 ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರಿಗೆ ಭೋಪಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT