ತಿರುಚ್ಚಿರಪಳ್ಳಿ (ತಮಿಳುನಾಡು): ತಾಂತ್ರಿಕ ದೋಷದಿಂದಾಗಿ ಖಾಸಗಿ ತರಬೇತಿ ಯುದ್ಧ ವಿಮಾನವೊಂದು ತಮಿಳುನಾಡಿನ ಪುದುಕೊಟ್ಟಾಯಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಪೈಲಟ್ ಮತ್ತು ತರಬೇತಿ ಪಡೆಯುತ್ತಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಮೂಲದ ವಿಮಾನಯಾನ ತರಬೇತಿ ಕಂಪನಿಯ ವಿಮಾನವು ಸೇಲಂ ವಿಮಾನನಿಲ್ದಾಣದಿಂದ ಕರೈಕುಡಿಗೆ ಪ್ರಯಾಣ ಆರಂಭಿಸಿತ್ತು. ಈ ವೇಳೆ ವಿಮಾನ ವಿಂಡ್ಶೀಲ್ಡ್ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಪೈಲಟ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಎಂಜಿನ್ನಲ್ಲಿ ದೋಷ ಉಂಟಾಗಿತ್ತು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.