ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಭುವನೇಶ್ವರದಲ್ಲಿ ಪ್ರವಾಸಿಗರಿಗಾಗಿ ಕ್ಲಿನಿಕ್‌ ಉದ್ಘಾಟನೆ

Published 13 ನವೆಂಬರ್ 2023, 14:48 IST
Last Updated 13 ನವೆಂಬರ್ 2023, 14:48 IST
ಅಕ್ಷರ ಗಾತ್ರ

ಭುವನೇಶ್ವರ (ಒಡಿಶಾ): ‘ಅಂತರರಾಷ್ಟ್ರೀಯ ಪ್ರವಾಸಕ್ಕೆ ತೆರಳುವವರ ಸಹಾಯಕ್ಕಾಗಿ ರಾಜ್ಯದ ಮೊದಲ‌ ಕ್ಲಿನಿಕ್‌ ಭುವನೇಶ್ವರ ಏಮ್ಸ್‌ನಲ್ಲಿ ಸೋಮವಾರ‌ ಉದ್ಘಾಟಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆ, ಸೂಚನೆಗಳನ್ನು ಈ ಕ್ಲಿನಿಕ್‌ನಲ್ಲಿ ನೀಡಲಾಗುವುದು. ಇದು ವಾರಕ್ಕೆ ಎರಡು ದಿನ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದ್ದಾರೆ.

ಪ್ರವಾಸಿಗರಿಗೆ ಆರೋಗ್ಯ‌ ಸಂಬಂಧಿ ಸಲಹೆ ನೀಡುವ ಸಂಚಾರಿ ಕ್ಲಿನಿಕ್‌ಗಳು ದೇಶದಲ್ಲಿ ಕೆಲವಷ್ಟೇ ಇವೆ. ಇವುಗಳಲ್ಲಿ ಭುವನೇಶ್ವರದ ಕ್ಲಿನಿಕ್‌ ಸಹ ಈಗ ಸೇರ್ಪಡೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT