ಅಗರ್ತಲಾ: ಸುಮಾರು ₹2 ಕೋಟಿ ಮೌಲ್ಯದ ಕೆಮ್ಮಿನ ನಿಷೇಧಿತ ಸಿರಫ್ ಅನ್ನು ತ್ರಿಪುರಾದ ಜಿರಾನಿಯಾ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸರ್ಕಾರಿ ರೈಲ್ವೆ ಪೊಲೀಸ್ ಪಡೆ (ಜಿಆರ್ಪಿ), ಕಸ್ಟಮ್ಸ್ ಇಲಾಖೆ ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಗುರುವಾರ ಸಂಜೆ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಶುಕ್ರವಾರ ಮುಂಜಾನೆಯವರೆಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಾಚರಣೆಯ ವೇಳೆ ನಿಲ್ದಾಣದಲ್ಲಿದ್ದ ಎರಡು ಸರಕು ಸಾಗಣೆ ರೈಲಿನ ವ್ಯಾಗನ್ಗಳಿಂದ 90,000 ನಿಷೇಧಿತ ‘ಎಸ್ಕಫ್’ ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರತಿ ಬಾಟಲ್ನಲ್ಲೂ 100 ಮಿಲಿ ಲೀಟರ್ನಷ್ಟು ಸಿರಪ್ ಇದೆ. ಪ್ರಕರಣದ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿ ಶುಕ್ರವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.