‘ಕದನ ವಿರಾಮಕ್ಕೆ ನಾನೇ ಕಾರಣ’
ಭಾರತ–ಪಾಕಿಸ್ತಾನ ಮಧ್ಯೆ ಕದನ ವಿರಾಮ ಮಧ್ಯಸ್ಥಿಕೆ ವಹಿಸಿದ್ದು ನಾನೇ ಎಂದು ಟ್ರಂಪ್ ಪದೇಪದೇ ಹೇಳುತ್ತಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣದಲ್ಲಿ ಟ್ರಂಪ್ ಇದೇ ವಿಚಾರ ಪುನರುಚ್ಚರಿಸಿದ್ದಾರೆ. ಮೂರನೇಯವರ ಮಧ್ಯಸ್ಥಿಕೆ ಇರಲಿಲ್ಲ ಎಂದು ಪ್ರಧಾನಿ ಮೋದಿಯವರೇ ಸ್ಪಷ್ಟಪಡಿಸಿದ್ದರೂ ‘ನಾನು ನಿಲ್ಲಿಸಿದ ಏಳು ಯುದ್ಧಗಳಲ್ಲಿ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷವೂ ಒಂದು ಎಂದು ಟ್ರಂಪ್ ಹೇಳಿದ್ದಾರೆ.