ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಉದ್ಘಾಟನೆ: ಅಯೋಧ್ಯೆಗೆ ತಿರುಪತಿಯಿಂದ 1 ಲಕ್ಷ ಲಾಡು ಪೂರೈಕೆ– TTD

Published 5 ಜನವರಿ 2024, 12:39 IST
Last Updated 5 ಜನವರಿ 2024, 12:39 IST
ಅಕ್ಷರ ಗಾತ್ರ

ತಿರುಪತಿ: ಇದೇ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಉದ್ಘಾಟನೆಗೆ ತಿರುಪತಿಯಿಂದ 1 ಲಕ್ಷ ಲಾಡುಗಳನ್ನು ಪೂರೈಸಲಾಗುವುದು ಎಂದು ಟಿಟಿಡಿ ಶುಕ್ರವಾರ ಹೇಳಿದೆ.

ರಾಮಮಂದಿರ ಉದ್ಘಾಟನೆಗೆ ಆಗಮಿಸುವ ಭಕ್ತಾದಿಗಳಿಗೆ ಹಂಚಲು ಈ ಲಾಡುಗಳನ್ನು ನೀಡಲಾಗುತ್ತಿದ್ದು, ಪ್ರತಿ ಲಾಡು 25 ಗ್ರಾಂ ಇರಲಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ. ವಿ. ಧರ್ಮ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಿರುಪತಿಗೆ 10 ದಿನದಲ್ಲಿ ₹40 ಕೋಟಿ ಕಾಣಿಕೆ

ವೈಕುಂಠ ಏಕಾದಶಿ ಸಂದರ್ಭದಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ 10 ದಿನಗಳ ಕಾಲ (2023ರ ಡಿಸೆಂಬರ್‌ 23ರಿಂದ ಈ ವರ್ಷದ ಜನವರಿಗೆ 1ರವರೆಗೆ) ವೈಕುಂಠದ್ವಾರ ದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ₹40 ಕೋಟಿ ಹಣ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಟಿಡಿಯು 36 ಲಕ್ಷ ಲಾಡುಗಳನ್ನು ಮಾರಾಟ ಮಾಡಿದೆ. 2 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ. ದಾಖಲೆಯ ಸಂಖ್ಯೆಯಲ್ಲಿ 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದರು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT