ಕೇಂದ್ರಪಾರ (ಒಡಿಶಾ): ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮಾಥ ಬೀಚ್ನಲ್ಲಿ ಉಪಗ್ರಹ ಸಂಪರ್ಕಿತ ಟ್ರ್ಯಾಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗಿದ್ದ ಆಲಿವ್ ರಿಡ್ಲಿ ಆಮೆಯೊಂದು 51 ದಿನಗಳಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಯಾಣಿಸಿ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರ್ಯಾಕಿಂಗ್ ಸಾಧನ ಅಳವಡಿಸಿದ್ದ ಆಮೆಯು ಶ್ರೀಲಂಕಾ, ತಮಿಳುನಾಡು ಮತ್ತು ಪುದುಚೇರಿ ಸಮುದ್ರದ ಮೂಲಕ ಸಾಗಿ 51 ದಿನಗಳಲ್ಲಿ 1,000 ಕಿ.ಮೀ. ಕ್ರಮಿಸಿ ಆಂಧ್ರ ಪ್ರದೇಶದ ಕರಾವಳಿಯನ್ನು ತಲುಪಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ಉಪಗ್ರಹ ಟ್ರ್ಯಾಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗಿದ್ದ ಆಮೆಯೊಂದನ್ನು ಆಂಧ್ರ ಪ್ರದೇಶದ ಸಮುದ್ರದಲ್ಲಿ ಪತ್ತೆಹಚ್ಚಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಪ್ರೇಮ್ ಶಂಕರ್ ಝಾ ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಒಡಿಶಾದಲ್ಲಿ ಟ್ರ್ಯಾಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾದ ಆಮೆಯೊಂದು ಇತ್ತೀಚೆಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದು ಮೊಟ್ಟೆ ಇಡಲು 3,500 ಕಿಲೋಮೀಟರ್ ಕ್ರಮಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ ಸುಮಾರು 3,000 ಆಮೆಗಳನ್ನು ಟ್ರ್ಯಾಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗುತ್ತದೆ. ಇದರಿಂದ ಆಮೆಗಳ ಸಂತಾನೋತ್ಪತ್ತಿ, ಚಲನವಲನ, ವಲಸೆ ಮಾರ್ಗ ಮತ್ತು ಆಹಾರ ಹುಡುಕುವ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.