ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್‌: ಕರಡಿ ಕೊಂದ ಇಬ್ಬರ ಬಂಧನ

Published 28 ಜೂನ್ 2024, 11:22 IST
Last Updated 28 ಜೂನ್ 2024, 11:22 IST
ಅಕ್ಷರ ಗಾತ್ರ

ಸರಾಯಿಕೆಲಾ(ಜಾರ್ಖಂಡ್‌): ಗ್ರಾಮಕ್ಕೆ ನುಗ್ಗಿದ ಕರಡಿ ಕೊಂದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

‘ಸರಾಯಿಕೆಲಾ- ಖಾರಸಾಂವ ಜಿಲ್ಲೆಯ ರಾಜನಗರ್‌ ಬ್ಲಾಕ್‌ನ ಜಮಾಡಿಹ್‌ ಗ್ರಾಮದಲ್ಲಿ ನಡೆದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರವೇ ದಾಳಿ ನಡೆಸಿದ್ದರು. ಕರಡಿ ಕೊಂದ ಆರೋಪದ ಮೇಲೆ ಇಬ್ಬರು ಗ್ರಾಮಸ್ಥರನ್ನು ಬಂಧಿಸಿದ್ದು, ಪ್ರಾಣಿಯ ದೇಹದ ಭಾಗಗಳನ್ನು ವಶಪಡಿಸಿಕೊಂಡು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ರಾಜ್‌ನಗರ ವಲಯ ಅರಣ್ಯ ಇಲಾಖೆ ಅಧಿಕಾರಿ ಶುಭಂ ಪಾಂಡ ತಿಳಿಸಿದರು.

‘ಇಬ್ಬರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT