ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ– ನೇಪಾಳ ಗಡಿ: ₹2 ಕೋಟಿ ಮೌಲ್ಯದ ಹೆರಾಯಿನ್‌ ವಶ, ಇಬ್ಬರ ಬಂಧನ

Published 18 ಏಪ್ರಿಲ್ 2024, 13:06 IST
Last Updated 18 ಏಪ್ರಿಲ್ 2024, 13:06 IST
ಅಕ್ಷರ ಗಾತ್ರ

ಮಹಾರಾಜ್‌ಗಂಜ್‌: ಭಾರತ– ನೇಪಾಳ ಗಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ₹2 ಕೋಟಿ ಮೌಲ್ಯದ 200 ಗ್ರಾಂ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿರುವ ‍ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಜಿಲ್ಲಾ ಪೊಲೀಸ್‌ ಮತ್ತು ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಜಂಟಿ ತಂಡವು ಈ ಕಾರ್ಯಾಚರಣೆ ನಡೆಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಸತ್ಯಂ ಮಾದೇಶಿಯಾ ಮತ್ತು ಆಶಿಶ್‌ ಪಸ್ವಾನ್‌ ಸೊನೌಲಿ ಎಂದು ಗುರುತಿಸಲಾಗಿದೆ. ನಿತ್ಯದ ತಪಾಸಣೆ ವೇಳೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರು ಮಾದಕ ವಸ್ತುವನ್ನು ಹಸ್ತಾಂತರಿಸಲು ನೇಪಾಳಕ್ಕೆ ತೆರಳುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಮಾದಕ ವಸ್ತುವಿನ ಮೂಲ ಹಾಗೂ ಆರೋಪಿಗಳ ಸಂಪರ್ಕ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT