ನಾಗ್ಪುರ್: ಪ್ರತಿಭಟನಾಕಾರರ ಸೋಗಿನಲ್ಲಿ ಬಂದಿದ್ದ ಇಬ್ಬರು ನಕ್ಸಲರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಗಢ್ಚಿರೋಲಿ ಜಿಲ್ಲೆಯ ಇಟ್ಟಪಲ್ಲಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಸೂರಜ್ಗಡ ಮೈನಿಂಗ್ ಪ್ರಾಜೆಕ್ಟ್ ವಿರುದ್ಧಇಟ್ಟಪಲ್ಲಿ ತಾಲೂಕಿನ ಅನೇಕ ಗ್ರಾಮಸ್ಥರು ಕಳೆದ ಮಂಗಳವಾರ ಹಾಗೂ ಬುಧವಾರ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಪ್ರತಿಭಟನಾಕಾರರ ಸೋಗಿನಲ್ಲಿ ಬಂದು, ವಿದ್ವಂಸಕ ಕೃತ್ಯಗಳನ್ನು ನಡೆಸಲು ತೀರ್ಮಾನಿಸಿದ್ದ ನಕ್ಸಲರನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದುಗಢ್ಚಿರೋಲಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಬಂಧಿತ ನಕ್ಸಲ್ರನ್ನು ಮುಡಾ ಮುಸಾ ಜೋಹಿ (32) ಹಾಗೂ ಮೈನು ದೋರ್ಪೇಟ್ (30) ಎಂದು ಗುರುತಿಸಲಾಗಿದೆ. ಇವರು ‘ಗಟ್ಟಾ ಎಲ್ಒಎಸ್ ಆಫ್ ಸಿಪಿಐ‘ (ಮಾವೋವಾದಿ) ಸಂಘಟನೆಗೆ ಸೇರಿದ್ದಾರೆ.ಕಳೆದ ಎರಡು ವರ್ಷಗಳಿಂದ ಈನಕ್ಸಲರು ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ನಕ್ಸಲ್ ಪೀಡಿತಗಢ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ. ಈಗ ಇಬ್ಬರು ನಕ್ಸಲ್ರನ್ನು ಬಂಧಿಸಿರುವ ನಮ್ಮ ಪೊಲೀಸರಿಗೆ 2 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ‘ ಎಂದುಎಸ್ಪಿ ಅಂಕಿತ್ ಗೋಯಲ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರ ಸಚಿವ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ಸಹೋದರಿ ಯಾಸ್ಮೀನ್ ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.