ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರವಾಹ: ಯುಎಇ ನೆರವು ಸ್ವೀಕರಿಸುವುದಕ್ಕೆ 'ಕೇಂದ್ರ ನೀತಿ' ಅಡ್ಡಿ?

Last Updated 22 ಆಗಸ್ಟ್ 2018, 1:47 IST
ಅಕ್ಷರ ಗಾತ್ರ

ನವದೆಹಲಿ: ಪ್ರವಾಹದಿಂದಾಗಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಕೇರಳಕ್ಕೆ ಯುಎಇ ಸರ್ಕಾರ ಘೋಷಿಸಿರುವ ₹700 ಕೋಟಿ ನೆರವು ಸ್ವೀಕರಿಸಲುಭಾರತಕ್ಕೆ ಸಾಧ್ಯವಾಗುವುದಿಲ್ಲ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಸ್ತುತ ಸರ್ಕಾರದ ನೀತಿಯಂತೆ ಈ ನೆರವು ಸ್ವೀಕರಿಸುವುದಕ್ಕೆ ಅಡಚಣೆಗಳಿವೆ. ಸರ್ಕಾರದ ನೀತಿ ಪ್ರಕಾರ ವಿದೇಶಗಳಿಂದ ಸಾಲದ ರೀತಿಯಲ್ಲಿ ಮಾತ್ರವೇ ಹಣ ಸ್ವೀಕರಿಸಬಹುದಾಗಿದೆ.

ಕೇರಳಕ್ಕೆ ₹700 ಕೋಟಿ ನೆರವು ನೀಡುವುದಾಗಿ ಯುಎಇಸರ್ಕಾರ ಭಾರತ ಸರ್ಕಾರಕ್ಕೆ ತಿಳಿಸಿತ್ತು.

ಉತ್ತರಾಖಂಡದಲ್ಲಿ ಪ್ರವಾಹವುಂಟಾದಾಗ ವಿದೇಶದಿಂದ ನೆರವು ಬಂದಿದ್ದರೂ ಆವಾಗ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಆ ಸಹಾಯವನ್ನು ನಿರಾಕರಿಸಿದ್ದರು.ವಿಶ್ವ ಬ್ಯಾಂಕ್ ನಿಂದ ಸಾಲ ಪಡೆದರೂ ನೆರವಿನ ಹಣ ಸ್ವೀಕರಿಸುವುದಿಲ್ಲ ಎಂದು ಚಿದಂಬರಂ ನಿಲುವು ತಾಳಿದ್ದರು.

ಕೇಂದ್ರ ಸರ್ಕಾರದ ಈ ನೀತಿ ಪ್ರಕಾರ ಸುನಾಮಿಯ ನಂತರ ಭಾರತ ವಿದೇಶದಿಂದ ನೆರವು ಸ್ವೀಕರಿಸಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಪ್ರಕೃತಿ ವಿಕೋಪಗಳುಂಟಾದಾಗ ವಿಶ್ವಸಂಸ್ಥೆ, ರಷ್ಯಾ, ಚೀನಾ ಮೊದಲಾದ ದೇಶಗಳು ನೆರವಿಗೆ ಧಾವಿಸಿದ್ದರೂ ಅಂದಿನ ಸರ್ಕಾರ ಅದನ್ನು ನಿರಾಕರಿಸಿತ್ತು.

ಅದೇ ವೇಳೆ ಸಾಲಪಡೆಯುವುದಕ್ಕೆ ಈ ನೀತಿ ತಡೆಯಾಗುವುದಿಲ್ಲ.ಹೀಗೆ ನೆರವು ಸ್ವೀಕರಿಸುವಾಗ ಕರಾರುಗಳಿಗೆ ಸಹಿ ಹಾಕಲುರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅನುಮತಿ ಪಡೆಯಲೇ ಬೇಕಿದೆ.

ಕೇರಳದ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ

ಸಹಾಯ ಮಾಡಲಿಚ್ಛಿಸುವವರು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆಹಣಕಳುಹಿಸಬಹುದು

Chief Minister's Distress Relief Fund

NO: 67319948232
Bank: State Bank of India
IFSC : SBIN0070028
SWIFT CODE : SBININBBT08

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT