ನವದೆಹಲಿ: ಮಾನ್ಯತೆ ಇರುವ ಪದವಿ ಕೋರ್ಸ್‌ಗಳ ಹೆಸರಗಳನ್ನೇ ಹೋಲುವ ಸಂಕ್ಷಿಪ್ತ ಹೆಸರುಗಳ ಮೂಲಕ ನಕಲಿ ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಗ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಅದರಲ್ಲೂ, ವಿಶೇಷವಾಗಿ ‘10 ದಿನಗಳ ಎಂಬಿಎ’ ಎಂಬ ಕೋರ್ಸ್ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆಯೋಗದ ಕಾರ್ಯದರ್ಶಿ ಮನೀಷ್ ಜೋಶಿ ಹೇಳಿದ್ದಾರೆ.

‘ಒಂದು ಪದವಿ ಕೋರ್ಸ್‌ನ ಸಂಕ್ಷಿಪ್ತ ರೂಪ, ಕೋರ್ಸ್‌ನ ಅವಧಿ, ಅದಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಕುರಿತು ಯುಜಿಸಿ ನಿರ್ಧರಿಸಿರುತ್ತದೆ. ಈ ಕುರಿತು ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವ ಜೊತೆಗೆ, ಗೆಜೆಟ್‌ನಲ್ಲಿ ಈ ಕುರಿತು ಅಧಿಸೂಚನೆಯನ್ನು ಸಹ ಪ್ರಕಟಿಸಲಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರದಿಂದ ಅಥವಾ ಅದರ ಕಾಯ್ದೆ ಅನ್ವಯ ಸ್ಥಾಪಿಸಲಾದ ವಿಶ್ವವಿದ್ಯಾಲಯ ಅಥವಾ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ ಇಲ್ಲವೇ ಸಂಸ್ಥೆಯೊಂದು ಮಾತ್ರ ಪದವಿ ಪ್ರದಾನ ಮಾಡುವ ಹಕ್ಕು ಹೊಂದಿರುತ್ತದೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.

‘ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಆನ್‌ಲೈನ್ ಕೋರ್ಸ್ ಆರಂಭಿಸಬೇಕಿದ್ದರೂ, ಅದಕ್ಕೆ ಯುಜಿಸಿಯಿಂದ ಅನುಮೋದನೆ ಪಡೆಯುವುದು ಅಗತ್ಯ. ಆನ್‌ಲೈನ್ ಕೋರ್ಸ್ ನಡೆಸಲು ಯುಜಿಸಿಯಿಂದ ಮಾನ್ಯತೆ ಹೊಂದಿರುವ ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್‌ಇಐ) ಪಟ್ಟಿಯು ಆಯೋಗದ ವೆಬ್‌ಸೈಟ್‌ನಲ್ಲಿ (deb.ugc.ac.in) ಲಭ್ಯ ಇದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.