ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿದ್ವಾರದಲ್ಲಿ ಭಾರಿ ಮಳೆ: ಕೊಚ್ಚಿ ಹೋದ ಕಾರುಗಳು

Published 29 ಜೂನ್ 2024, 15:02 IST
Last Updated 29 ಜೂನ್ 2024, 15:02 IST
ಅಕ್ಷರ ಗಾತ್ರ

ಹರಿದ್ವಾರ: ಹರಿದ್ವಾರದಲ್ಲಿ ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಸೂಖೀ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಹಲವು ಕಾರುಗಳು ಕೊಚ್ಚಿಹೋಗಿವೆ.

ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಯಾತ್ರಾಸ್ಥಳಗಳ ರಸ್ತೆಗಳು ಜಲಾವೃತವಾಗಿವೆ.

ಮಳೆಯಿಲ್ಲದೆ ಸೂಖೀ ನದಿ ಒಣಗಿತ್ತು. ಹೀಗಾಗಿ ನದಿಯ ತಟದಲ್ಲಿ ಜನರು ತಮ್ಮ ಕಾರುಗಳನ್ನು ನಿಲ್ಲಿಸಿದ್ದರು. ಏಕಾಏಕಿ ಸುರಿದ ಮಳೆಯಿಂದಾಗಿ ನದಿಯು ತುಂಬಿ ಹರಿದು ಪ್ರವಾಹ ಸೃಷ್ಟಿಯಾದ ಕಾರಣ ಹಲವು ಕಾರುಗಳು ಕೊಚ್ಚಿಹೋಗಿವೆ.

ಗಂಗಾ ನದಿ ಮೇಲೆ ನಿರ್ಮಿಸಲಾದ ಸೇತುವೆ ಮೇಲೆ ನಿಂತು ಕಾರುಗಳು ಕೊಚ್ಚಿಹೋಗುತ್ತಿರುವ ದೃಶ್ಯವನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT