ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ‘ಗಮನಾರ್ಹ ಸಂಖ್ಯೆಯ’ ಐಎಸ್‌ಐಎಸ್ ಉಗ್ರರ ಇರುವಿಕೆಯ ಕುರಿತ ವಿಶ್ವಸಂಸ್ಥೆಯ ವರದಿಯನ್ನು ಸರ್ಕಾರ ನಿರಾಕರಿಸಿದ್ದು, ಇದರಲ್ಲಿರುವ ಅಂಕಿ–ಅಂಶಗಳು ‘ವಾಸ್ತವಿಕವಾಗಿ ಸರಿ ಇಲ್ಲ’ ಎಂದು ತಿಳಿಸಿದೆ.

ವಿಶ್ವಸಂಸ್ಥೆಯವರದಿಯ ಕುರಿತು ಸರ್ಕಾರಕ್ಕೆ ಮಾಹಿತಿ ಇದೆಯೇ ಎನ್ನುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ, ‘ವರದಿಯನ್ನು ಸರ್ಕಾರ ಗಮನಿಸಿದೆ. ಆದರೆ, ಕೇರಳ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಉಗ್ರರು ಇದ್ದಾರೆ ಎನ್ನುವುದು ವಾಸ್ತವಿಕವಾಗಿ ಸರಿಯಿಲ್ಲ. ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಇರುವಿಕೆಯ ಕುರಿತು 34 ಹಾಗೂ ಲಷ್ಕರ್ ಇ ತಯಬಾದ ಉಗ್ರರ ಇರುವಿಕೆಯ ಕುರಿತು 20 ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ದಾಖಲಿಸಿದೆ’ ಎಂದರು.

ದೇಶದಲ್ಲಿ ಐಎಸ್‌ಐಎಸ್, ಐಎಸ್ ಖೋರಸನ್, ಲಷ್ಕರ್ ಇ ತಯಬಾದಂಥ ಉಗ್ರ ಸಂಘಟನೆಗಳ ಇರುವಿಕೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಇದಕ್ಕೆ ಸಂಬಂಧಿಸಿದಂತೆ ಎನ್‌ಐಎ, 160 ಜನರನ್ನು ಹಾಗೂ 80 ಆರೋಪಿಗಳನ್ನು ಬಂಧಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.