ಮುಂಬೈ: ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಯುನಿಸೆಫ್ ಆರಂಭಿಸಿರುವ ‘ಮಕ್ಕಳ ಹಕ್ಕುಗಳ ಅಭಿಯಾನ‘ದ ಭಾರತೀಯ ತಾರಾ ಪ್ರಚಾರಕರಾಗಿ ಬಾಲಿವುಡ್ ನಟ ಆಯಷ್ಮಾನ್ ಖುರಾನಾ ಅವರನ್ನು ನೇಮಿಸಲಾಗಿದೆ ಎಂದು ಯುನಿಸೆಫ್ ಇಂಡಿಯಾ ಸಂಸ್ಥೆ ಪ್ರಕಟಿಸಿದೆ.

ಯುನಿಸೆಫ್‌ನ ಭಾರತದ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್ ಅವರು ಆಯುಷ್ಮಾನ್ ಖುರಾನ ಅವರ ನೇಮಕವನ್ನು ಪ್ರಕಟಿಸಿದ್ದಾರೆ.

ಖ್ಯಾತ ಫುಟ್‌ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಮ್ ಅವರುಜಾಗತಿಕ ಮಟ್ಟದಲ್ಲಿ ‘ಮಕ್ಕಳ ಹಕ್ಕುಗಳ ಅಭಿಯಾನ‘ದ ತಾರಾ ಪ್ರಚಾರಕರಾಗಿದ್ದರೆ, ಆಯುಷ್ಮಾನ್ ಖುರಾನ ಭಾರತದಲ್ಲಿ ಈ ಅಭಿಯಾನದ ಜತೆಯಾಗಲಿದ್ದಾರೆ.

‘ಖುರಾನ ಅವರು ಪ್ರತಿ ಮಗುವಿನಲ್ಲಿ ಆತ್ಮವಿಶ್ವಾಸ, ತೀವ್ರ ಆಸಕ್ತಿ ಮತ್ತು ಸೂಕ್ಷ್ಮತೆಗಳನ್ನು ಬೆಳೆಸುವ ಮೂಲಕ, ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಯುನಿಸೆಫ್‌ನೊಂದಿಗೆ ಕೈ ಜೋಡಿಸಲಿದ್ದಾರೆ‘ ಎಂದು ಯಾಸ್ಮಿನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.