ನವದೆಹಲಿ : ರಾಜ್ಯಸಭೆ ಆಯ್ಕೆ ಸಮಿತಿ ಮಾಡಿದ್ದ ಪ್ರಮುಖ ಶಿಫಾರಸುಗಳನ್ನು ಅಳವಡಿಸಿದ ನಂತರ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

‘ಈ ಮೊದಲು, ಮಹಿಳೆಯ ಹತ್ತಿರದ ಬಂಧು ಮಾತ್ರ ಬಾಡಿಗೆ ತಾಯಿಯಾಗಲು ಅವಕಾಶ ಇತ್ತು. ಆದರೆ, ಬಾಡಿಗೆ ತಾಯಿಯಾಗಲು ಇಚ್ಛೆ ವ್ಯಕ್ತಪಡಿಸುವ ಯಾವುದೇ ಮಹಿಳೆಗೆ ಸಹ ಅನುಮತಿ ನೀಡಬೇಕು ಎಂಬುದಾಗಿಸಂಸದೀಯ ಸಮಿತಿಯ ಶಿಫಾರಸು ಮಾಡಿತ್ತು. ಈ ಅಂಶವನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಸಭಾದ 23 ಸದಸ್ಯರಿರುವ ಸಮಿತಿಯು 15 ಪ್ರಮುಖ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಅವುಗಳನ್ನೂ ಮಸೂದೆಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.