ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯಲ್ಲಿ ಇಂದು ‘ಮನ್‌ ಕಿ ಬಾತ್‌’ ನೇರ ಪ್ರಸಾರ

Published 29 ಏಪ್ರಿಲ್ 2023, 15:56 IST
Last Updated 29 ಏಪ್ರಿಲ್ 2023, 15:56 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು (ಮನ್‌ ಕಿ ಬಾತ್‌) ಮಾಸಿಕ ರೇಡಿಯೊ ಕಾರ್ಯಕ್ರಮದ 100ನೇ ಸಂಚಿಕೆಯು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರವಾಗಲಿದೆ. 

ವಿಶ್ವಸಂಸ್ಥೆಯ ಭಾರತದ ಕಾಯಂ ಆಯೋಗವು ಈ ಕುರಿತು ಟ್ವೀಟ್‌ ಮಾಡಿದೆ.

‘ಪ್ರಧಾನಿ ಮೋದಿ ಅವರ ಮನದ ಮಾತು ಕಾರ್ಯಕ್ರಮವು ಏಪ್ರಿಲ್‌ 30ರಂದು ವಿಶ್ವಸಂಸ್ಥೆಯ ಟ್ರಸ್ಟಿಶಿಪ್‌ ಕೌನ್ಸಿಲ್‌ ಚೇಂಬರ್‌ನಲ್ಲಿ ಪ್ರಸಾರವಾಗಲಿದೆ. ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಲಿದೆ’ ಎಂದಿದೆ.

ಕಾರ್ಯಕ್ರಮವು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಅದೇ ವೇಳೆ ಅಮೆರಿಕದಲ್ಲಿ ತಡರಾತ್ರಿ 1.30ಕ್ಕೆ ಪ್ರಸಾರವಾಗಲಿದೆ.

‘ಈ ಕಾರ್ಯಕ್ರಮವು ಭಾರತದ ರಾಷ್ಟ್ರೀಯ ಮಾಸಿಕ ಪದ್ಧತಿಯಾಗಿದೆ. ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಭಾಗಿಯಾಗಲು ಲಕ್ಷಾಂತರ ಜನರಿಗೆ ಇದು ಸ್ಫೂರ್ತಿ ನೀಡಿದೆ’ ಎಂದು ಭಾರತದ ಕಾಯಂ ಆಯೋಗ ಹೇಳಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ ಜನರಲ್‌ ಅವರು ಭಾರತೀಯ ಸಮುದಾಯದ ಸಂಘಟನೆಗಳ ಜೊತೆ ಸೇರಿ ನ್ಯೂಜರ್ಸಿಯಲ್ಲಿಯೂ ಕಾರ್ಯಕ್ರಮದ ನೇರ ಪ್ರಸಾರವನ್ನು ಆಯೋಜಿಸಿದ್ದಾರೆ. 

‘ಏಪ್ರಿಲ್‌ 30ರ ರಾತ್ರಿ 1.30ಕ್ಕೆ ಮನ್‌ ಕಿ ಬಾತ್‌–100 ಕಾರ್ಯಕ್ರಮ ಕೇಳುವುದನ್ನು ತಪ್ಪಿಸಬೇಡಿ. ಭಾರತೀಯ ಸಮುದಾಯ ಮತ್ತು ಜಗತ್ತಿನಾದ್ಯಂತ ಕೇಳುಗರನ್ನು ಮೋದಿ ಅವರು ಸಂಧಿಸಲಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಸಂಚಿಕೆ ಆಚರಿಸೋಣ’ ಎಂದು ಕಾನ್ಸುಲೇಟ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT