ಲಖನೌ: ಆಗ್ರಾದ ಜಮಾ ಮಸೀದಿಯಲ್ಲಿ ಪ್ರಾಣಿ ಮಾಂಸದ ತುಂಡು ಇರಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಗರದ ತೀಲಾ ನಂದ್ರಮ್ ನಿವಾಸಿ ನಜ್ರುದ್ದೀನ್ ಬಂಧಿತ.
.ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸುಪ್ರೀಂ ಕೋರ್ಟ್ ಕಿಡಿ.
ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿರುವ ಆಗ್ರಾ ಪೊಲೀಸ್ ಕಮೀಷನರ್, ‘ಇಂದು 11.04.2025ರಂದು ಬೆಳಿಗ್ಗೆ ಮಂತೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯಲ್ಲಿ ಪ್ರಾಣಿ ಮಾಂಸದ ತುಂಡು ಪತ್ತೆಯಾಗಿತ್ತು. ಪ್ರಕರಣದ ತನಿಖೆಗೆ ತಂಡ ರಚಿಸಿ, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.

ಆತನ ಕೃತ್ಯದ ಹಿಂದಿನ ಉದ್ದೇಶ ಅರಿಯಲು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆಯ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.
.ಉತ್ತರ ಪ್ರದೇಶ | ಹೆರಿಗೆ ವೇಳೆ ಹೊಟ್ಟೆಯಲ್ಲೇ ಹತ್ತಿಯುಂಡೆ ಬಿಟ್ಟ ವೈದ್ಯೆ.
‘ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ಬಗ್ಗೆ ನಮಗೆ ಮಾಹಿತಿ ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಓರ್ವ ವ್ಯಕ್ತಿ ಮಾಂಸದ ಪೊಟ್ಟಣವನ್ನು ಮಸೀದಿಯೊಳಗೆ ಇಟ್ಟು ಹೋಗುತ್ತಿರುವುದು ಕಂಡು ಬಂದಿದೆ’ ಎಂದು ನಗರ ಡಿಸಿಪಿ ಸೊನಮ್ ಕುಮಾರ್ ತಿಳಿಸಿದ್ದಾರೆ.

ಕೂಡಲೇ 100 ಮಂದಿಯ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿದೆ. ಮಾಂಸವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
.ಉತ್ತರ ಪ್ರದೇಶ: ರೈಲ್ವೆ ನಿಲ್ದಾಣದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ.
ಮಸೀದಿಗೆ ಮಾಂಸದ ಪೊಟ್ಟಣ ತರಲು ಸ್ಕೂಟಿ ಬಳಸಲಾಗಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಸ್ಕೂಟಿಯನ್ನು ಪತ್ತೆ ಮಾಡಿ, ಮಾಂಸದ ಅಂಗಡಿಗೆ ತಲುಪಿದ ಪೊಲೀಸರು ವಿಚಾತಣೆ ನಡೆಸಿದ್ದಾರೆ. ಇದರ ಬಳಿಕ ನಜ್ರುದ್ದೀನ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
.ಉತ್ತರ ಪ್ರದೇಶ |ರಾಜ್ಯದ ಅಭಿವೃದ್ಧಿಗೆ ತಡೆಗೋಡೆಯಾಗಿರುವ ವಿರೋಧ ಪಕ್ಷಗಳು: CM ಯೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.