ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ: ಪ್ರಶ್ನೆಪತ್ರಿಕೆ ಸೋರಿಕೆ, ಎನ್‌ಎಸ್‌ಎ ಅಡಿ ಆರೋಪ ದಾಖಲು

Last Updated 1 ಮೇ 2022, 10:50 IST
ಅಕ್ಷರ ಗಾತ್ರ

ಬಲ್ಲಿಯಾ: ಉತ್ತರ ಪ್ರದೇಶದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

ಮಾ ಲಚಿಯಮುರತ್ ಯಾದವ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಕ್ಷಯ್‌ ಲಾಲ್‌ ಯಾದವ್‌ ಅವರ ವಿರುದ್ಧ ಎನ್‌ಎಸ್‌ಎ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ ಎಂದು ಉಭಾನ್‌ ಪೊಲೀಸ್‌ ವಿಶೇಷ ಠಾಣಾಧಿಕಾರಿ ಅವಿನಾಶ್‌ ಸಿಂಗ್‌ ಹೇಳಿದರು.

ಪ್ರಶ್ನೆ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿಈ ಮೊದಲು ನಿರ್ಭಯ್‌ ನಾರಾಯಣ್‌ ಸಿಂಗ್‌,ಭೀಮಪುರ ಮಹಾರಾಜಿ ದೇವಿ ಸ್ಮಾರಕ ಅಂತರ ಕಾಲೇಜು ವ್ಯವಸ್ಥಾಪಕ ರಾಜು ಪ್ರಜಾಪತಿ ಮತ್ತು ರವೀಂದ್ರ ಸಿಂಗ್ ಅವರ ವಿರುದ್ಧ ಎನ್‌ಎಸ್‌ಎ ಅಡಿ ಮೊಕದ್ದಮೆ ದಾಖಲಿಸಲಾಗಿತ್ತು.

ಮಾರ್ಚ್‌ 30 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಮೂವರು ಪತ್ರಕರ್ತರು, ಆರು ಶಾಲೆಗಳ ವ್ಯವಸ್ಥಾಪಕರು ಮತ್ತು ಐದು ಶಾಲೆಗಳ ಪ್ರಾಂಶುಪಾಲರು ಸೇರಿ ಸುಮಾರು 52 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಂಧಿತರಲ್ಲಿಬಲ್ಲಿಯಾ ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ (ಡಿಐಒಎಸ್‌) ಬ್ರಿಜೇಶ್‌ ಮಿಶ್ರಾ ಅವರೂ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT