ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುದ್ಧ್‌ ಅಭ್ಯಾಸ್‌’: ಅಮೆರಿಕದ ಸೈನಿಕರೊಬ್ಬರಿಗೆ ಕೋವಿಡ್‌ ದೃಢ

Last Updated 9 ಫೆಬ್ರುವರಿ 2021, 10:12 IST
ಅಕ್ಷರ ಗಾತ್ರ

ಬಿಕಾನೇರ್: ‘ಭಾರತ– ಅಮೆರಿಕ ಸೇನೆಗಳ ಜಂಟಿ ಸಮರಾಭ್ಯಾಸ ಸೋಮವಾರ ಆರಂಭಗೊಂಡಿದ್ದು, ಸಮರಾಭ್ಯಾಸಕ್ಕೆ ಮುಂಚಿತವಾಗಿ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಅಮೆರಿಕದ ಸೈನಿಕರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

‘ಅಮೆರಿಕದ ಸೇನಾ ತುಕಡಿಯು ಶನಿವಾರ ಸೂರತ್‌ಗಢ್‌ಗೆ ಆಗಮಿಸಿದೆ. ಈ ವೇಳೆ ಎಲ್ಲಾ ಸೈನಿಕರನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಸೋಂಕಿನ ಲಕ್ಷಣಗಳಿದ್ದ ಒಬ್ಬ ಸೈನಿಕರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬಳಿಕ ಪರೀಕ್ಷಾ ವರದಿಯಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಮೂಲಗಳು ಹೇಳಿವೆ.

‘ಸಮರಾಭ್ಯಾಸದ ಆರಂಭದಲ್ಲೇ ಸೋಂಕಿತ ಸೈನಿಕರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಈವರೆಗೂ ಅವರು ಸಮರಾಭ್ಯಾಸದಲ್ಲಿ ಭಾಗಿಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

ಭಾರತ– ಅಮೆರಿಕ ಸೇನೆಗಳ ಜಂಟಿ ಸಮರಾಭ್ಯಾಸವಾದ ‘ಯುದ್ಧ್‌ ಅಭ್ಯಾಸ್‌’ ರಾಜಸ್ಥಾನದ ಮಹಾನ್ ಫೀಲ್ಡ್‌ ಫೈರಿಂಗ್‌ ರೇಂಜ್‌ನಲ್ಲಿ ಸೋಮವಾರ ಆರಂಭಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT