ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲೇ ಮೊದಲು: ಭೂಕಂಪದ ಮುನ್ಸೂಚನೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ– ಎಲ್ಲಿ?

Last Updated 4 ಆಗಸ್ಟ್ 2021, 12:03 IST
ಅಕ್ಷರ ಗಾತ್ರ

ಡೆಹ್ರಾಡೂನ್: ಭೂಕಂಪದ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ 'ಉತ್ತರಾಖಂಡ್ ಭೂಕಂಪ್ ಅಲರ್ಟ್' ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬುಧವಾರ ಲೋಕಾರ್ಪಣೆ ಮಾಡಿದ್ದಾರೆ. ರೂರ್ಕಿಯ ಐಐಟಿಯಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಉತ್ತರಾಖಂಡದಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಈ ರೀತಿಯ ಮೊಬೈಲ್ ಅಪ್ಲಿಕೇಶನ್ ಲಭ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಮೊಬೈಲ್ ಆ್ಯಪ್ ಬಿಡುಗಡೆ ಬಳಿಕ ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.

ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಲಭ್ಯವಾಗುವ ದೃಷ್ಟಿಯಿಂದ ಅಪ್ಲಿಕೇಶನ್ ಎರಡೂ ಆವೃತ್ತಿಗಳಲ್ಲಿ ಲಭ್ಯವಿದೆ.

ಈ ಯೋಜನೆಯನ್ನು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ) ಪ್ರಾಯೋಜಿಸಿದೆ.

ಇದು ಭೂಕಂಪದ ಎಚ್ಚರಿಕೆಗಳ ಬಗ್ಗೆ ಜನರಿಗೆ ಸೂಚನೆ ನೀಡುವ ದೇಶದ ಮೊದಲ ಅಪ್ಲಿಕೇಶನ್ ಆಗಿರುವುದರಿಂದ ಸಂಸ್ಥೆಗೆ ಇದೊಂದು ಅಭೂತಪೂರ್ವ ಸಾಧನೆಯಾಗಿದೆ. ಭೂಕಂಪದ ನಂತರ ಮಣ್ಣಿನಡಿ ಸಿಲುಕಿರುವ ಜನರನ್ನು ಪತ್ತೆ ಹಚ್ಚಲೂ ಸಹ ಈ ಆ್ಯಪ್ ಸಹಾಯ ಮಾಡುತ್ತದೆ.

ಭೂಕಂಪದ ಮುನ್ನ ಎಚ್ಚರಿಕೆ (ಇಇಡಬ್ಲ್ಯೂ) ನೀಡುವುದು ಒಂದು ನೈಜ ಸಮಯದ ಭೂಕಂಪದ ಮಾಹಿತಿ ವ್ಯವಸ್ಥೆಯಾಗಿದೆ. ಇದು ಭೂಕಂಪದ ಆರಂಭವನ್ನು ಪತ್ತೆ ಮಾಡುತ್ತದೆ ಮತ್ತು ಒಂದು ಪ್ರದೇಶದಲ್ಲಿ ಕಂಪನಗಳು ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ನೀಡುತ್ತದೆ ಎಂದು ರೂರ್ಕಿಯ ಐಐಟಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಭೂಪದರದ ತಪ್ಪು ಚಲನೆಯಿಂದ ಬಿಡುಗಡೆಯಾದ ಒತ್ತಡದ ನಂತರ ಹರಡುವ ಭೂಕಂಪನ ಅಲೆಗಳ ವೇಗ ಈ ವ್ಯವಸ್ಥೆಗೆ ಭೌತಿಕ ಆಧಾರವಾಗಿದೆ. ಪ್ರಬಲವಾದ ನೆಲದ ಅಲುಗಾಡುವಿಕೆಯು ತರಂಗಗಳಿಂದ ಉಂಟಾಗುತ್ತದೆ, ಬಳಿಕ, ಇದು ಪ್ರಾಥಮಿಕ ಅಲೆಗಳ ಅರ್ಧದಷ್ಟು ವೇಗದಲ್ಲಿ ಚಲಿಸುತ್ತದೆ ಮತ್ತು ವಿದ್ಯುತ್ಕಾಂತೀಯ ಸಂಕೇತಗಳಿಗಿಂತ ಹೆಚ್ಚು ನಿಧಾನವಾಗಿರುತ್ತದೆ. ಇಇಡಬ್ಲ್ಯೂ ವ್ಯವಸ್ಥೆಯು ಇದನ್ನೇ ಬಳಸಿಕೊಳ್ಳುತ್ತದೆ ಎಂದು ಐಐಟಿ ಹೇಳಿದೆ.

ಉತ್ತರಾಖಂಡದ ಗರ್ವಾಲ್ ಪ್ರದೇಶಕ್ಕಾಗಿ ಭೂ ವಿಜ್ಞಾನ ಸಚಿವಾಲಯವು ಆರಂಭದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಿತ್ತು. ಅದರ ಯಶಸ್ಸು ಮತ್ತು ಪ್ರದೇಶದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಐಐಟಿ ರೂರ್ಕಿಯ ಇಇಡಬ್ಲ್ಯೂ ಯೋಜನೆಯ ಪ್ರಸ್ತಾಪವನ್ನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT