ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ: ಸ್ಮಾರಕ ಲೋಕಾರ್ಪಣೆ

ಪ್ರಧಾನಿ ನರೇಂದ್ರಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪುಷ್ಪ ನಮನ
Last Updated 25 ಡಿಸೆಂಬರ್ 2018, 9:08 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ94ನೇ ಜನ್ಮದಿನದ ಅಂಗವಾಗಿ ಮಂಗಳವಾರ ಅವರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಯಿತು.

ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ದೀರ್ಘಕಾಲಿನ ಅನಾರೋಗ್ಯದಿಂದ ಬಳಲುತ್ತಿದ್ದ ಅಜಾತಶತ್ರು ವಾಜಪೇಯಿ ಅವರು ಇದೇ ಆಗಸ್ಟ್‌ 16ರಂದು ಕೊನೆ ಉಸಿರೆಳೆದಿದ್ದರು. ವಾಜಪೇಯಿ ಅವರ ಕುಟುಂಬದವರು,ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಹ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.

‘ವಾಯಪೇಯಿ ಅವರು ಈ ದೇಶದ ಬಗ್ಗೆ ಕಂಡಂತಹ ಕನಸನ್ನು ನನಸು ಮಾಡುವ ಮಾರ್ಗದಲ್ಲಿ ನಾವು ಸಾಗುತ್ತೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಗೌರವ ಸಲ್ಲಿಸಿದರು.ಕಮಲ ಕಲಾಕೃತಿಯನ್ನು ರೂಪಿಸಲಾಗಿದೆ. ಜೊತೆಗೆಸ್ಮಾರಕದ ಗೋಡೆಗಳ ಮೇಲೆ ವಾಜಪೇಯಿ ಅವರ ಕವನಗಳನ್ನು ಕೆತ್ತಿಸಲಾಗಿದೆ.

ಗಣ್ಯರು ಸ್ಮಾರಕಕ್ಕೆ ನಮನ ಸಲ್ಲಿಸುವ ವೇಳೆಯೇ ಖ್ಯಾತ ಗಾಯಕ ಪಂಕಜ್‌ ಉದಾಸ್‌ ಅವರ ಕಂಠದಲ್ಲಿ ಭಕ್ತಿ ಗೀತೆಗಳು ತೇಲಿಬರುತ್ತಿದ್ದವು.ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಟ್ರಸ್ಟ್‌ ಈ ಸ್ಮಾರಕ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.

ಕೇಂದ್ರ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಪ್ರದೇಶದಲ್ಲಿಈ ಸ್ಮಾರಕ ನಿರ್ಮಿಸಿದೆ. ಈ ಯೋಜನೆಗೆ ಒಟ್ಟು₹10.51 ವೆಚ್ಚವಾಗಿದೆ. ಅಟಲ್‌ ಸ್ಮೃತಿ ಸಮಿತಿ ನಿಧಿಯಿಂದ ಅದನ್ನು ನಿರ್ಮಿಸಲಾಗಿದೆ. ಸುಮಿತ್ರಾ ಮಹಾಜನ್‌, ಬಿಹಾರ್‌ ರಾಜ್ಯಪಾಲ ಲಾಲ್‌ಜಿ ತಂಡನ್‌, ಗುಜರಾತ್‌ ರಾಜ್ಯಪಾಲ ಒ.‍ಪಿ. ಕೊಹ್ಲಿ, ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ, ಬಿಜೆಪಿ ಮುಖಂಡರಾದ ವಿಜಯ್‌ ಕುಮಾರ್ ಮಲ್ಹೋತ್ರ ಮತ್ತು ರಾಮ್‌ ಲಾಲ್‌ ಈ ಸಮಿತಿಯ ಸಂಸ್ಥಾಪನ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT