ಸಂಸತ್ತಿನ ಒಳಗೆ ಮತ್ತು ಆವರಣದಲ್ಲಿ ‘ಜೈ ಹಿಂದ್’ ಮತ್ತು ‘ವಂದೇ ಮಾತರಂ’ ಅನ್ನು ಹೇಳುವಂತಿಲ್ಲ ಎಂದು 2024ರಲ್ಲಿ ರಾಜ್ಯಸಭಾ ಸಚಿವಾಲಯವು ಸಂಸದರಿಗೆ ಹೇಳಿತ್ತು. ಸಂಸತ್ತಿನ ಘನತೆಯನ್ನು ಮತ್ತು ಸಭ್ಯತೆಯನ್ನು ಕಾಪಾಡಲು ಇವುಗಳನ್ನು ಹೇಳುವಂತಿಲ್ಲ ಎಂದು ಸಚಿವಾಲಯ ಹೇಳಿತ್ತು. ‘ರಾಜ್ಯಸಭಾ ಸದಸ್ಯರ ಕೈಪಿಡಿ’ಯಲ್ಲಿ ಈ ಬಗ್ಗೆ ಉಲ್ಲೇಖವಿದೆ. 2024ರ ಅಧಿವೇಶನಕ್ಕೂ ಮೊದಲು ಈ ಕೈಪಿಡಿಯನ್ನು ಸಂಸದರಿಗೆ ನೀಡಲಾಗಿತ್ತು.