ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಲ್ತಾನ್‌ಪುರದಲ್ಲಿ ತಾಯಿ ಪರ ವರುಣ್‌ ಗಾಂಧಿ ಪ್ರಚಾರ

Published 23 ಮೇ 2024, 14:04 IST
Last Updated 23 ಮೇ 2024, 14:04 IST
ಅಕ್ಷರ ಗಾತ್ರ

ಸುಲ್ತಾನ್‌ಪುರ: ಬಿಜೆಪಿ ಮುಖಂಡ ಹಾಗೂ ಪಿಲಿಭಿತ್ ಕ್ಷೇತ್ರದ ಸಂಸದ ವರುಣ್‌ ಗಾಂಧಿ ಅವರು ತಾಯಿ ಮೇನಕಾ ಗಾಂಧಿ ಪರ ಸುಲ್ತಾನ್‌ಪುರದಲ್ಲಿ ಗುರುವಾರ ಪ್ರಚಾರ ನಡೆಸಿದರು.

ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿದೆ. ಆದರೆ ಒಂದು ಪ್ರದೇಶದ ಜನರು ಮಾತ್ರ ತಮ್ಮ ಸಂಸದರನ್ನು ‘ಸಂಸದ್‌ಜಿ’, ‘ಮಂತ್ರಿಜಿ’ ಅಥವಾ ಹೆಸರಿನಿಂದ ಕರೆಯುವುದಿಲ್ಲ ಬದಲಾಗಿ ‘ಮಾತಾಜಿ’ ಎಂದು ಕರೆಯುತ್ತಾರೆ’ ಎಂದು ಕ್ಷೇತ್ರದ ಜನರಿಗೆ ಮೇನಕಾ ಗಾಂಧಿ ಅವರ ಮೇಲಿರುವ ಗೌರವವನ್ನು ಉಲ್ಲೇಖಿಸಿದರು.

ವರುಣ್‌ ಗಾಂಧಿ ಸುಲ್ತಾನ್‌ಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು, ಇದರಿಂದ ತಮ್ಮ ಗೆಲುವಿಗೆ ಅನುಕೂಲವಾಗಲಿದೆ ಎಂದು ಮೇನಕಾ ಗಾಂಧಿ ತಿಳಿಸಿದ್ದಾರೆ.

ವರುಣ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು. ಪಿಲಿಭಿತ್ ಕ್ಷೇತ್ರದಿಂದ ಸ್ಪರ್ಧಿಸಲು ವರುಣ್‌ ಅವರಿಗೆ ಬಿಜೆಪಿಯು ಟಿಕೆಟ್‌ ನಿರಾಕರಿಸಿತ್ತು. ಸುಲ್ತಾನ್‌ಪುರ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT