ಚೆನ್ನೈ: ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರದ ‘ಔಷಧೀಯ’ ಗುಣಗಳ ಬಗ್ಗೆ ಶ್ಲಾಘಿಸಿ ಮಾತನಾಡಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜನವರಿ 15ರಂದು ‘ಮಾಟು ಪೊಂಗಲ್’ ದಿನದಂದು ಇಲ್ಲಿನ ಗೋ ಸಂರಕ್ಷಣಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಉಪನ್ಯಾಸ ನೀಡಿದ್ದರು.

‘ಗೋಮೂತ್ರವು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಜೀರ್ಣಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಇರಿಟೇಬಲ್ ಬೊವೆಲ್ ಸಿಂಡ್ರೋಮ್ ಅಂತಹ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಗೋಮೂತ್ರಕೆ ಅನೇಕ ಔಷಧೀಯ ಗುಣಗಳಿವೆ’ ಎಂದು ಹೇಳಿರುವುದು ವಿಡಿಯೊದಲ್ಲಿ ಇದೆ.

ತೀವ್ರ ಜ್ವರ ಬಂದಾಗ ಗೋಮೂತ್ರ ಸೇವಿಸಿದ ಸನ್ಯಾಸಿಯೊಬ್ಬನ ಜೀವನದ ವೃತ್ತಾಂತವನ್ನು ಹೇಳುವಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ಐಐಟಿ ನಿರ್ದೇಶಕರ ಹೇಳಿಕೆಗಳನ್ನು ಟೀಕಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಕಾರ್ತಿ ಪಿ. ಚಿದಂಬರಂ, ‘ಐಐಟಿ ಮದ್ರಾಸ್ ನಿರ್ದೇಶಕರು ಹುಸಿ ವಿಜ್ಞಾನವನ್ನು ಪ್ರಚಾರ ಮಾಡುತ್ತಿರುವುದು ಆಘಾತಕಾರಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.