ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿಯ ವೈದ್ಯಕೀಯ ವಿದ್ಯಾಲಯದಲ್ಲಿ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ಥಳಿಸಿದ ವೈದ್ಯ

Last Updated 4 ಸೆಪ್ಟೆಂಬರ್ 2018, 12:42 IST
ಅಕ್ಷರ ಗಾತ್ರ

ರಾಂಚಿ: ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ವಿದ್ಯಾಲಯದ ಕಿರಿಯ ವೈದ್ಯ, ರೋಗಿಯೊಬ್ಬರ ಜೊತೆಯಲ್ಲಿದ್ದವನನ್ನು ಅಟ್ಟಾಡಿಸಿಕೊಂಡು ಥಳಿಸಿರುವದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,ಈ ಘಟನೆ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯ ಆಡಳಿತ ಮಂಡಳಿ ಆದೇಶಿಸಿದೆ.

ವಿಡಿಯೊದಲ್ಲಿ ಏನಿದೆ?

ಆಸ್ಪತ್ರೆ ನಿಯಮಗಳಬಗ್ಗೆಕಿರಿಯ ವೈದ್ಯ ಹಾಗೂ ರೋಗಿಯೊಂದಿಗೆ ಇದ್ದ ವ್ಯಕ್ತಿ ಯ ನಡುವೆ ಪರಸ್ಪರವಾಗ್ವಾದ ನಡೆದಿದೆ.ಈ ಜಗಳವನ್ನು ವೀಕ್ಷಿಸುತ್ತಿದ್ದ ಜನರಿಗೆ ಕಿರಿಯ ವೈದ್ಯ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಸಿದ್ದಾನೆ,ನಂತರವ್ಯಕ್ತಿಯ ಕತ್ತುಪಟ್ಟಿ ಹಿಡಿದು ಥಳಿಸಿ, ತುರ್ತು ಚಿಕಿತ್ಸಾ ಘಟಕದ ಗೇಟ್‌ ಬಳಿ ಎಳೆದಾಡಿದ್ದಾರೆ. ಈದೃಶ್ಯ ವೈರಲ್ ಆಗಿರುವವಿಡಿಯೊದಲ್ಲಿದೆ.

ರೋಗಿಯೊಬ್ಬರನ್ನು ಭಾನುವಾರ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ರೋಗಿಯ ಸ್ನೇಹಿತರು ವೈದ್ಯರೊಂದಿಗೆ ಆಸ್ಪತ್ರೆಯ ನಿಯಮಗಳ ಕುರಿತು ವಾಗ್ವಾದ ನಡೆಸಿದ್ದರು. ಎಂದು ಮೂಲಗಳು ತಿಳಿಸಿವೆ.

ಆರಂಭಗೊಂಡ ತನಿಖೆ

ಆಸ್ಪತ್ರೆಯ ಆಡಳಿತವು ಘಟನೆ ಕುರಿತು ತನಿಖೆ ನಡೆಸಲು ಇಬ್ಬರು ಅಧಿಕಾರಿಗಳಸಮಿತಿಯೊಂದನ್ನು ರಚಿಸಿದ್ದು, 48 ಗಂಟೆಯೊಳಗೆ ವರದಿ ನೀಡಬೇಕೆಂದು ಆದೇಶಿಸಿದೆ.

‘ನಾವು ಈಗಾಗಲೇ ಉಪ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ್‌ ಕುಮಾರ್‌ ಮತ್ತು ಉಪ ನಿರ್ದೇಶಕ ಗಿರಿಜಾ ಶಂಕರ್‌ ನೇತೃತ್ವದ ಸಮಿತಿ ರಚಿಸಿದ್ದು, ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದು,48 ಗಂಟೆಯೊಳಗೆ ವರದಿಯನ್ನು ಸಲ್ಲಿಸುತ್ತಾರೆ’ ಎಂದು ಆರ್‌ಐಎಂಎಸ್‌ನ ನಿರ್ದೇಶಕ ಡಾ.ಆರ್‌.ಕೆ.ಶ್ರೀವಾಸ್ತವ ತಿಳಿಸಿದ್ದಾರೆ

‘ಆರ್‌ಐಎಂಎಸ್‌ ನಿರ್ದೇಶಕರು ವೈದ್ಯನ ಹೆಸರನ್ನು ಬಹಿರಂಗ ಪಡಿಸುವವರೆಗೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಗಾಯಗೊಂಡ ವ್ಯಕ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT