ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 6ರ ಒಳಗೆ ವಿ.ವಿ ಜಾಗ ತೆರವು ಮಾಡಿ: ಅಮರ್ತ್ಯ ಸೆನ್‌ಗೆ ನೋಟಿಸ್‌

ಅಮರ್ತ್ಯ ಸೆನ್‌ ಅವರಿಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ನೋಟಿಸ್‌
Last Updated 20 ಏಪ್ರಿಲ್ 2023, 16:18 IST
ಅಕ್ಷರ ಗಾತ್ರ

ಕೋಲ್ಕತ್ತ: ‘ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್‌ ಅವರು ಮೇ 6ರ ಒಳಗೆ ಅಥವಾ ನೋಟಿಸ್‌ ಪಡೆದ 15 ದಿನಗಳ ಒಳಗೆ ಒತ್ತುವರಿ ಮಾಡಿಕೊಂಡಿರುವ ವಿಶ್ವಭಾರತಿ ವಿಶ್ವವಿದ್ಯಾಲಯದ ಜಾಗವನ್ನು ತೆರವು ಮಾಡಬೇಕು’ ಎಂದು ವಿಶ್ವವಿದ್ಯಾಲಯವು ಇದೇ 19ರಂದು ನೀಡಿದ ನೋಟಿಸ್‌ನಲ್ಲಿ ತಿಳಿಸಿದೆ.

ಒತ್ತುವರಿ ಜಾಗವನ್ನು ಅಮರ್ತ್ಯ ಸೆನ್‌ ಅವರು ತೆರವು ಮಾಡಬೇಕು. ಇಲ್ಲವಾದಲ್ಲಿ ಪಡೆಗಳನ್ನು ಬಳಕೆ ಮಾಡಿಕೊಂಡು ತೆರವು ಕಾರ್ಯಾಚರಣೆ ನಡೆಸುವುದಾಗಿಯೂ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

‘ವಿಶ್ವವಿದ್ಯಾಲಯದ ಆವರಣದ 1.25 ಎಕರೆ ಪ್ರದೇಶವನ್ನು ಮಾತ್ರವೇ ಅಮರ್ತ್ಯ ಸೆನ್‌ ಅವರು ಬಳಸಿಕೊಳ್ಳಬಹುದಾಗಿದೆ. ಇಷ್ಟು ಜಾಗವನ್ನು ಸೆನ್‌ ಅವರ ತಂದೆ ಗುತ್ತಿಗೆಗೆ ಪಡೆದುಕೊಂಡಿದ್ದರು. ಆದರೆ, ಸೆನ್‌ ಅವರು ಒಟ್ಟು 1.38 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ 5,662.8 ಚದರ ಅಡಿ ಹೆಚ್ಚುವರಿ ಜಾಗವನ್ನು ಸೆನ್‌ ಅವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ಜಂಟಿ ರಿಜಿಸ್ಟ್ರಾರ್‌ ಅಶೋಕ್ ಮಹತೋ ಅವರು ಬುಧವಾರ ಹೇಳಿದ್ದಾರೆ.

‘1.25 ಎಕರೆ ಜಾಗವನ್ನು ನನ್ನ ತಂದೆ ವಿಶ್ವವಿದ್ಯಾಲಯದಿಂದ ಗುತ್ತಿಗೆ ಪಡೆದಿದ್ದರು. 5,662.8 ಚದರ ಅಡಿ ಹೆಚ್ಚುವರಿ ಜಾಗವನ್ನು ನನ್ನ ತಂದೆಯೆ ವಿಶ್ವವಿದ್ಯಾಲಯದಿಂದ ಖರೀದಿ ಮಾಡಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ’ ಎಂದು ಅಮರ್ತ್ಯ ಸೆನ್‌ ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

ನೋಟಿಸ್‌ಗೆ ವಿರೋಧ: ‘ಅಮರ್ತ್ಯ ಸೆನ್‌ ಅವರ ಮನೆಯನ್ನು ಕೆಡವಲು ವಿಶ್ವವಿದ್ಯಾಲಯ ಮುಂದಾದರೆ, ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಬೋಧನಾ ಸಿಬ್ಬಂದಿ ಅಸೋಸಿಯೇಷನ್‌ ಅಧ್ಯಕ್ಷ ಸುದೀಪ್ತೊ ಭಟ್ಟಾಚಾರ್ಯ ಹೇಳಿದ್ದಾರೆ.

‘ವಿಶ್ವವಿದ್ಯಾಲಯವು ಯಾವ ಮಟ್ಟದ ವರೆಗೆ ಹೋಗಲಿದೆ ಎಂಬುದನ್ನು ನಾವೂ ನೋಡುತ್ತೇವೆ’ ಎಂದು ವಿಶ್ವವಿದ್ಯಾಲಯದ ಎಸ್‌ಎಫ್‌ಐ ನಾಯಕ ಸೋಮ್‌ನಾಥ್‌ ತಿಳಿಸಿದರು.

**

ಸೆನ್‌ ಅವರು ಜೂನ್‌ನಲ್ಲಿ ಭಾರತಕ್ಕೆ ಮರಳಿದ್ದಾರೆ. ಆದರೆ, ನಾವು ಅಲ್ಲಿಯ ವರೆಗೂ ಕಾಯುತ್ತೇವೆಯೇ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದೇವೆ‌

ಮಹುವಾ ಬ್ಯಾನರ್ಜಿ, ವಿಶ್ವಭಾರತಿ ವಿಶ್ವವಿದ್ಯಾಲಯ ವಕ್ತಾರೆ

ಕಾಂಗ್ರೆಸ್‌ ವಿರೋಧ

ನವದೆಹಲಿ: ಕೇಂದ್ರ ಸರ್ಕಾರವು ಅಮರ್ತ್ಯ ಸೆನ್‌ ಅವರನ್ನು ‘ಗುರಿ’ ಮಾಡುತ್ತಿದೆ ಎಂದು ಕಾಂಗ್ರೆಸ್‌ ಗುರುವಾರ ಆರೋಪಿಸಿದೆ.

ನಮ್ಮ ವಿರುದ್ಧ ಕಟುವಾಗಿ ಟೀಕಿಸುವವರನ್ನು ಪ್ರಧಾನಿ ಮೋದಿ ಅವರು ಹಿಂಸಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಮೋದಿ ಅವರು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸೆನ್‌ ಅವರನ್ನು ಗುರಿಯಾಗಿಸಿದ್ದಾರೆ. ಜೊತೆಗೆ, ವಾಯಪೇಯಿ ಅವರ ಸರ್ಕಾರವು ಸೆನ್‌ ಅವರು ಭಾರತ ರತ್ನ ನೀಡಿತ್ತು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT