ನವದೆಹಲಿ: ದೇಶದಲ್ಲಿ ಪ್ರತಿ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಜುಲೈ 10ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇದರ ಮಧ್ಯೆಯೇ ಈ ಅರ್ಜಿ ಸಲ್ಲಿಕೆಯಾಗಿದೆ.

ಅಶ್ವಿನಿ ಉಪಾಧ್ಯಾಯ ಅವರು, ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿರುವ ಅರ್ಜಿಗಳ ಜೊತೆಯೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬೇಕೆಂದು ನ್ಯಾಯಮೂರ್ತಿಗಳಾದ ಸುಧಾಂಶು ದುಲಿಯಾ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವನ್ನು ಮಂಗಳವಾರ ಕೋರಿದ್ದಾರೆ.

ದೇಶದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕೆಂದು ನೈಜ ಭಾರತೀಯ ಪ್ರಜೆಗಳು ಮಾತ್ರ ನಿರ್ಧಾರ ಮಾಡಬೇಕೇ ವಿನಾ ವಿದೇಶಿ ಅಕ್ರಮ ನುಸುಳುಕೋರರಲ್ಲ. ಹೀಗಾಗಿ ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

‘ಸ್ವಾತಂತ್ಯಾ ನಂತರ ಅಕ್ರಮ ನುಸುಳುವಿಕೆ, ಜನಸಂಖ್ಯಾ ಸ್ಫೋಟದಿಂದಾಗಿ 200 ಜಿಲ್ಲೆಗಳು ಮತ್ತು 1,500 ತಾಲ್ಲೂಕುಗಳ ಜನಸಂಖ್ಯಾ ಸ್ಥಿತಿ ಬದಲಾಗಿದೆ. ಈಗಾಗಲೇ ಸಾಕಷ್ಟು ಜಿಲ್ಲೆಗಳ ಭವಿಷ್ಯವನ್ನು ಭಾರತೀಯರಲ್ಲದವರು ರೂಪಿಸಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಚುನಾವಣೆಗಳ ಮೂಲಕವೇ ದೇಶವು ತನ್ನ ರಾಜಕೀಯ ವ್ಯವಸ್ಥೆ ಮತ್ತು ನೀತಿಗಳನ್ನು ರೂಪಿಸುತ್ತದೆ. ನೈಜ ಪ್ರಜೆಗಳು ಮಾತ್ರ ಮತದಾನದ ಹಕ್ಕು ಹೊಂದಿರಬೇಕು ಎನ್ನುವುದನ್ನು ಖಚಿತಪಡಿಸುವುದು ಕೇಂದ್ರ, ರಾಜ್ಯಗಳು ಮತ್ತು ಚುನಾವಣಾ ಆಯೋಗದ ಕರ್ತವ್ಯ. ಹೀಗಾಗಿ ಕಾಲಕಾಲಕ್ಕೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಪರಿಷ್ಕರಣೆ ಅಗತ್ಯ. ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೂ 8000–10,000 ಅಕ್ರಮ, ನಕಲಿ ಮತದಾರರು ಸೇರಿಕೊಂಡಿದ್ದಾರೆ. ಕನಿಷ್ಠ 2,000–3000 ಮತಗಳ ವ್ಯತ್ಯಾಸವೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಿವರಿಸಿದ್ದಾರೆ.

ಚುನಾವಣಾ ಆಯೋಗದಿಂದ ಸ್ಪಷ್ಟನೆ

ನವದೆಹಲಿ: ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧ ಪಕ್ಷಗಳು ಒಗ್ಗೂಡಿ ವಿರೋಧ ವ್ಯಕ್ತಪಡಿಸುತ್ತಿವೆ. ಈ ಮಧ್ಯೆ ಚುನಾವಣಾ ಆಯೋಗವು ‘ಈ ಪ್ರಕ್ರಿಯೆಯು ಸಮಗ್ರವಾಗಿ ಪ್ರತಿ ಮತದಾರರನ್ನು ಒಳಗೊಂಡೇ ನಡೆಯುತ್ತಿದೆ’ ಎಂದು ಮಂಗಳವಾರ ಪ್ರತಿಕ್ರಿಯಿಸಿದೆ. ಪ್ರಕ್ರಿಯೆಯು ಬಿಹಾರದ 7.89 ಕೋಟಿ ಮತದಾರರನ್ನು ಒಳಗೊಂಡೇ ನಡೆಯಲಿದೆ ಎಂದು ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದರು. ಮತದಾರರ ಹೆಸರು ವಿಳಾಸ ಮತ್ತಿತರ ದತ್ತಾಂಶ ದಾಖಲಿಸಲು ಅರ್ಜಿ ನಮೂನೆಗಳನ್ನು 7.69 ಕೋಟಿ ಜನರಿಗೆ ಅಥವಾ ಶೇ 97.42ರಷ್ಟು ಮತದಾರರಿಗೆ ವಿತರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಜಿ ನಮೂನೆಯನ್ನು ಸಂಗ್ರಹಿಸುತ್ತಿದ್ದಾರೆ. ಮೊದಲನೇ ಭೇಟಿ ಪೂರ್ಣಗೊಂಡಿದೆ ಎರಡನೇ ಭೇಟಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಆಗಸ್ಟ್ 1ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯು ಜುಲೈ 25ರ ಒಳಗಾಗಿ ಅರ್ಜಿ ನಮೂನೆ ಸಲ್ಲಿಸಿರುವವರ ಹೆಸರನ್ನು ಒಳಗೊಂಡಿರಲಿದೆ ಎಂದು ಹೇಳಿದರು. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1 ಕಡೆಯ ದಿನವಾಗಿದ್ದು ಆಗ ಅರ್ಹತಾ ದಾಖಲೆಗಳನ್ನು ಪ್ರತ್ಯೇಕವಾಗಿ ಸಲ್ಲಿಸಬಹುದು ಎಂದು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.