ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಮ್ಮು ಮತ್ತು ಕಾಶ್ಮೀರದ ಜನರ ಬಳಿ ಇರುವ ಏಕೈಕ ಶಕ್ತಿ: ಮೆಹಬೂಬ ಮುಫ್ತಿ

Published 21 ಮಾರ್ಚ್ 2024, 13:08 IST
Last Updated 21 ಮಾರ್ಚ್ 2024, 13:08 IST
ಅಕ್ಷರ ಗಾತ್ರ

ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, 'ಮತದಾನವೇ ಜಮ್ಮು ಮತ್ತು ಕಾಶ್ಮೀರದ ಜನರ ಬಳಿ ಉಳಿದಿರುವ ಏಕಮಾತ್ರ ಶಕ್ತಿ' ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ರೀತಿಯ ಅನ್ಯಾಯಗಳನ್ನು ಎಸಗಲಾಗುತ್ತಿದ್ದು, ಕೇಂದ್ರಾಡಳಿತ ಪ್ರದೇಶವನ್ನು ಜೈಲಿನಂತೆ ಪರಿವರ್ತಿಸಲಾಗಿದೆ. ಇಲ್ಲಿಯ ಜನರ ಧ್ವನಿಯನ್ನು ಅಡಗಿಸಲು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಿಡಿಪಿಯನ್ನು ಒಡೆದರು. ಅಲ್ಲದೆ, ಪಕ್ಷದ ಧ್ವನಿಯನ್ನು ಮುಗಿಸಲು ಶಾಸಕರು, ಮಂತ್ರಿಗಳು ಮತ್ತು ಸಂಸದರನ್ನು ಪಕ್ಷದಿಂದ ಕಸಿದುಕೊಂಡಿದ್ದಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾಶ್ಮೀರದ ಜನರು ಈಗ ಮತದಾನದ ಹಕ್ಕನ್ನಷ್ಟೇ ಹೊಂದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಹಲವು ಪಕ್ಷಗಳು ರಚನೆಗೊಂಡಿವೆ. ಇದರಿಂದ ಕೇಂದ್ರವು ತಮ್ಮ ಒಲವಿನ ನಾಯಕರನ್ನು ಸಂಸತ್ತಿಗೆ ಕಳುಹಿಸಬಹುದಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ಜನ ಮತದಾನದ ಶಕ್ತಿ ಬಗ್ಗೆ ಅರಿಯಲು ಬಹಳ ಸಮಯ ಬೇಕಾಯಿತು ಎಂಬುದನ್ನು ದೇಶದ ಜನ ಅರಿಯಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲಿದೆ ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೆಂಪು ಕೋಟೆಯ ಭಾಷಣದಲ್ಲಿ ಘೋಷಿಸಬೇಕಾಯಿತು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT