ಮುಂಬೈ: ಕೋವಿಡ್–19 ಸೋಂಕು ಪ್ರಕರಣಗಳನ್ನು ನಿಯಂತ್ರಿಸುವುದಕ್ಕಾಗಿ ಮಹಾರಾಷ್ಟ್ರದಲ್ಲಿ 15 ದಿನಗಳ ಕಾಲ ಲಾಕ್‌ಡೌನ್ ಮಾದರಿಯಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, ಆ ಪ್ರಕಾರ ವಾಯುವಿಹಾರ, ಜಾಗಿಂಗ್ ಮತ್ತು ಸೈಕ್ಲಿಂಗ್ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ.

ಅಗತ್ಯ ಸೇವೆಗಳ ವ್ಯಾಪ್ತಿಗೆ ಒಳಪಡುವ ಕೊರಿಯರ್ ಸೇವೆಗೆ ಅನುಮತಿ ನೀಡಲಾಗಿದೆ. ಮದ್ಯದ ಅಂಗಡಿಗಳು ಮತ್ತು ಸಿಗರೇಟ್ ಮಾರಾಟ ಮಳಿಗೆಗಳನ್ನು ತೆರೆಯದಂತೆ ಆದೇಶಿಸಲಾಗಿದೆ. ದಾಸಿಯರು, ಚಾಲಕರು, ಅಡುಗೆಯವರು ಮತ್ತು ಸಹಾಯಕರ ಬಗ್ಗೆ ಆಯಾ ಸ್ಥಳೀಯ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ.

ಲಾಕ್‌ಡೌನ್ ಜಾರಿಗೊಳಿಸಿದರೆ ಸಾಮಾನ್ಯ ಜನರ ನಿತ್ಯದ ಬದುಕಿಗೆ ತೊಂದರೆಯಾಗುತ್ತದ ಎಂಬುದರ ಕುರಿತು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ, ಲಾಕ್‌ಡೌನ್ ಮಾದರಿಯ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಸ್ಪಷ್ಟೀಕರಣ ನೀಡಲು ಸಾಮಾನ್ಯ ಪ್ರಶ್ನೋತ್ತರಗಳಿರುವ ಆರು ಪುಟಗಳ ಮಾಹಿತಿಯನ್ನು ಸಿದ್ಧಪಡಿಸಿದೆ.

ಸರ್ಕಾರ ವಿಧಿಸಿರುವ ಹೊಸ ನಿಯಮಗಳ ಪ್ರಕಾರ ‘ನಿರ್ದಿಷ್ಟ ಕಾರಣವಿಲ್ಲದೇ ಖಾಸಗಿ ವಾಹನಗಳು ರಾಜ್ಯದೊಳಗೆ ಸಂಚರಿಸುವಂತಿಲ್ಲ. ಸರ್ಕಾರದ ಸಾರಿಗೆ ಸಂಸ್ಥೆಯ ವಾಹನಗಳನ್ನು ಬಳಸುವ ನಾಗರಿಕರು ತಾವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದೇವೆ ಎಂಬುದಕ್ಕೆ ದಾಖಲೆಯಾಗಿ ಟಿಕೆಟ್ ನೀಡಬೇಕು‘

ಕಟ್ಟಡ ಕಾರ್ಮಿಕರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು, ಎಲೆಕ್ಟ್ರೀಷಿಯನ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸುವುದು ಕಷ್ಟ. ಹಾಗಾಗಿ ಅವರನ್ನು ಸ್ವಚ್ಛತಾ ಕಾರ್ಮಿಕರು, ಸೋಂಕು ನಿವಾರಕರು ಮತ್ತು ಕೀಟ ನಿಯಂತ್ರಕರ ಸೇವೆಯಂತೆ ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ.

ಕೋವಿಡ್: ದೇಶದಲ್ಲಿ 10 ದಿನಗಳಲ್ಲಿ ದುಪ್ಪಟ್ಟು ಪ್ರಕರಣ

ಹೊಸ ಆದೇಶದ ಅನ್ವಯ, ಸ್ಟೇಷನರಿ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಟ್ರಾವಲ್ ಏಜೆನ್ಸಿಗಳು ಕಚೇರಿಗಳನ್ನು ತೆರೆಯುವಂತಿಲ್ಲ. ಈ ಕಚೇರಿಗಳು ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸಬಹುದು.

ಮುಂಬೈ: 5–ಸ್ಟಾರ್ ಹೊಟೇಲ್ಗಳಲ್ಲಿ ಕೋವಿಡ್ ರೋಗಿಗಳ ಆರೈಕೆಗೆ ಬಿಎಂಸಿ ಸಮ್ಮತಿ

ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ನೀಡುವ ಅಗತ್ಯ ಸೇವೆಗಳ ಬಗ್ಗೆ ಆದೇಶದಲ್ಲಿ ಹೀಗೆ ಉಲ್ಲೇಖಿಸಲಾಗಿದೆ; ‘ಈ ಸೇವೆಗಳಿಗೆ ದಿನವಿಡೀ ಅನುಮತಿ ನೀಡಲಾಗಿದೆ. ಸ್ಥಳೀಯ ಪ್ರಾಧಿಕಾರಗಳು ಬೇರೆ ಯಾವುದಾದರೂ ಕಾಯಿದೆಯಡಿ (ನಿಯಮಿತ ದಿನಗಳಲ್ಲಿ ರೆಸ್ಟೋರೆಂಟ್‌ಗಳಿಗೆ ಸಮಯ ನಿಗದಿಪಡಿಸಿದಂತೆ) ಸಮಯವನ್ನು ನಿಗದಿಪಡಿಸಲು ಅವಕಾಶವಿದೆ‘.

ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ: ಮಾಲ್, ಜಿಮ್, ಸ್ಪಾಗಳು ಬಂದ್–ಕೇಜ್ರಿವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.