ರಜೌರಿ/ಜಮ್ಮು: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರು ಹಾಗೂ ಸರ್ಕಾರಿ ಅಧಿಕಾರಿಗಳ ಯುದ್ಧ ಸ್ಮಾರಕವನ್ನು ಜಮ್ಮು–ಕಾಶ್ಮೀರ ಸರ್ಕಾರವು ಸೇನೆಯ ಸಹಕಾರದೊಂದಿಗೆ ಗಡಿ ಜಿಲ್ಲೆಯಲ್ಲಿ ನಿರ್ಮಿಸಿದೆ.

ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನವು ಗುಜ್ಜರ್ ಮಂಡಿ ಚೌಕ್ ಪ್ರದೇಶದ ಮೇಲೆ ನಡೆಸಿದ ಶೆಲ್ ದಾಳಿಯಿಂದ ಹಾನಿಯಾದ ಪ್ರದೇಶದಲ್ಲೇ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಪಾಕಿಸ್ತಾನವು ಕಳೆದ ಮೇ 10ರಂದು ನಡೆಸಿದ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ರಜೌರಿಯ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ (ಎಡಿಡಿಸಿ) ರಾಜ್ಕುಮಾರ್ ಥಾಪಾ ಸಹ ಒಬ್ಬರು.

ಸ್ಮಾರಕದಲ್ಲಿ ಥಾಪಾ ಸೇರಿದಂತೆ ಕೃಷ್ಣ ಘಾಟಿ ಬ್ರಿಗೇಡ್ನ ಸುಬೇದಾರ್ ಮೇಜರ್ ಪವನ್ ಕುಮಾರ್ ಮತ್ತು ಕರ್ತವ್ಯದಲ್ಲಿದ್ದಾಗಲೇ ಜೀವ ಕಳೆದುಕೊಂಡ ಇತರ ಮೂವರು ಸೇನಾ ಸಿಬ್ಬಂದಿಯ ಭಿತ್ತಿಚಿತ್ರಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.