ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INS Kolkata: 35 ಸೊಮಾಲಿಯಾ ಕಡಲ್ಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ನೌಕಾಪಡೆ

Published 23 ಮಾರ್ಚ್ 2024, 5:47 IST
Last Updated 23 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆ ಅಧಿಕಾರಿಗಳು 35 ಸೊಮಾಲಿಯಾ ಕಡಲ್ಗಳ್ಳರನ್ನು ಶನಿವಾರ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಭಾರತೀಯ ನೌಕಾಪಡೆಗೆ ಸೇರಿದ ಐಎನ್‌ಎಸ್‌ ಕೋಲ್ಕತ್ತ ನೌಕೆಯಲ್ಲಿ 35 ಸೊಮಾಲಿಯಾ ಕಡಲ್ಗಳ್ಳರನ್ನು ಶನಿವಾರ ಬೆಳಗ್ಗೆ ಮುಂಬೈಗೆ ಕರೆತರಲಾಗಿತ್ತು. ಇವರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು ಅವರ ಮೇಲೆ ಸಮುದ್ರದಲ್ಲಿ ಕಳ್ಳತನ ವಿರೋಧಿ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸಂಬಂಧಿತ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. 

ಕಳೆದ ವಾರ ಸೊಮಾಲಿಯಾ ಕಡಲ್ಗಳ್ಳರು ಬಲ್ಗೇರಿಯಾದ ಹಡಗನ್ನು ಅಪಹರಿಸಿದ್ದರು. ಇದರಲ್ಲಿ ಭಾರತೀಯರು ಸೇರಿದಂತೆ  ಬಲ್ಗೇರಿಯಾದ ಪ್ರಜೆಗಳಿದ್ದರು. 

ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್‌ಎಸ್‌ ಕೋಲ್ಕತ್ತ ನೌಕೆಯನ್ನು ರವಾನಿಸಿತ್ತು. ನಂತರ ಯಶಸ್ವಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಣೆ ಮಾಡಿ, 35 ಜನ ಸೊಮಾಲಿಯಾ ಕಡಲ್ಗಳ್ಳರನ್ನು ಬಂಧಿಸಿತ್ತು. 

ಕೆಂಪು ಸಮುದ್ರ ಪ್ರದೇಶದಲ್ಲಿ ಹುಥಿ ಬಂಡುಕೋರರು, ಸೊಮಾಲಿಯಾ ಕಡಲ್ಗಳ್ಳರು ಸರಕು ಸಾಗಣೆ ಹಡಗುಗಳ ಮೇಲೆ ಈಚಿನ ದಿನಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈಚಿನ ವಾರಗಳಲ್ಲಿ ಭಾರತೀಯ ನೌಕಾಪಡೆಯು ದಾಳಿಗೆ ಗುರಿಯಾದ ಹಲವು ಹಡಗುಗಳಿಗೆ ನೆರವಿನ ಹಸ್ತ ಚಾಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT