ವಯನಾಡ್ (ಕೇರಳ): ವಯನಾಡ್ ಜಿಲ್ಲೆಯ ಮುಂಡಕ್ಕೈ–ಚೂರಲ್ಮಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸ್ಥಳೀಯರಿಗೆ ಪ್ರವಾಹ ಭೀತಿ ಎದುರಾಗಿದೆ.

ಜಿಲ್ಲಾ ಅಧಿಕಾರಿಗಳು ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದು, ‘ಚೂರಲ್ಮಲ ನದಿಯ ಮಣ್ಣುಮಿಶ್ರಿತ ನೀರು ಬೈಲೆ ಸೇತುವೆ ಬಳಿಯ ನದಿ ದಂಡೆಗಳಲ್ಲಿ ರಭಸವಾಗಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ದುರಸ್ತಿ ಕಾಮಗಾರಿ ಗಳಿಗಾಗಿ ಸಂಗ್ರಹಿಸಿದ್ದ ಮಣ್ಣು ಕೂಡ ಕೊಚ್ಚಿ ಹೋಗುತ್ತಿದ್ದು, ಅಟ್ಟಮಲ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೀರು ಆವರಿಸುತ್ತಿದೆ’ ಎಂದಿದ್ದಾರೆ.

ಏತನ್ಮಧ್ಯೆ, ಕಬಿನಿ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಾನಾಸುರ ಜಲಾಶಯವು ತುಂಬುವ ಮಟ್ಟಕ್ಕೆ ಬಂದಿರುವ ಕಾರಣದಿಂದ ಸುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ವಯನಾಡ್ ಸೇರಿದಂತೆ 11 ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣಕ್ಕೆ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಕೂಡ ಘೋಷಿಸಿದೆ.
.Wayanad landslide: ಮಾದರಿ ಟೌನ್ಶಿಪ್ಗೆ ಸಿಎಂ ಪಿಣರಾಯಿ ವಿಜಯನ್ ಶಂಕುಸ್ಥಾಪನೆ .Wayanad landslide | ಕೇಂದ್ರದಿಂದ ಇನ್ನೂ ನೆರವು ಬಂದಿಲ್ಲ: ಪಿಣರಾಯಿ ವಿಜಯನ್ .Wayanad Landslides | ಪುನರ್ವಸತಿಗೆ ತಿಂಗಳ ವೇತನ ದೇಣಿಗೆ ನೀಡಿದ ರಾಹುಲ್ ಗಾಂಧಿ.Wayanad Landslides | ₹2,000 ಕೋಟಿ ಪರಿಹಾರ ಒದಗಿಸಲು ಕೇಂದ್ರಕ್ಕೆ ವಿಜಯನ್ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.