ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯಾಗಳಿಗೆ ಜಮೀನು ಕೊಟ್ಟರೆ 'ಇಮಾಮ್-ಎ-ಹಿಂದ್' ಶ್ರೀರಾಮನಿಗೆ ಭವ್ಯ ಕಟ್ಟಡ

ಶಿಯಾ ವಕ್ಫ್ ಮಂಡಳಿ ವಕೀಲರ ಹೇಳಿಕೆ ವೈರಲ್
Last Updated 9 ನವೆಂಬರ್ 2019, 10:27 IST
ಅಕ್ಷರ ಗಾತ್ರ


ನವದೆಹಲಿ: ಅಯೋಧ್ಯೆಯ ಜಮೀನನ್ನು ಶಿಯಾ ವಕ್ಫ್ ಮಂಡಳಿಗೆ ನೀಡಿದರೆ, ಶಿಯಾಗಳು ಇಮಾಮ್-ಎ-ಹಿಂದ್ ಶ್ರೀರಾಮನ ನೆನಪಿನಲ್ಲಿ ಭವ್ಯ ಕಟ್ಟಡವನ್ನು ಕಟ್ಟಿಸುತ್ತಾರೆ ಎಂದು ಶಿಯಾ ವಕ್ಫ್ ಮಂಡಳಿ ಪರ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಹೇಳಿರುವುದು ಈಗ ವೈರಲ್ ಆಗಿದೆ.

ಸುಪ್ರೀಂ ಕೋರ್ಟ್ ಶನಿವಾರದಂದು ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮುನ್ನ ವಕ್ಫ್ ಶಿಯಾ ಮಂಡಳಿಯ ಪರ ವಕೀಲರು ಈ ಹೇಳಿಕೆ ನೀಡಿದ್ದರು.

ಕಾನೂನಿನ ಪ್ರಕಾರ, ಜಮೀನನ್ನು ಶಿಯಾ ವಕ್ಫ್ ಮಂಡಳಿಗೆ ನೀಡಬೇಕು. ಯಾಕೆಂದರೆ ಮಸೀದಿಯನ್ನು ನಿರ್ಮಿಸಿದ್ದು ಶಿಯಾ ಪಂಥದವರು. ಕಾನೂನಿನ ಪ್ರಕಾರ ಶಿಯಾಗಳಿಗೆ ಈ ಜಮೀನು ಸಿಕ್ಕರೆ, ಅವರು ಅಲ್ಲಿ ಶ್ರೀರಾಮನ ಸ್ಮರಣೆಗಾಗಿ ಭವ್ಯ ಕಟ್ಟಡವೊಂದನ್ನು ನಿರ್ಮಿಸುತ್ತಾರೆ ಎಂದು ಅಶ್ವಿನಿ ಉಪಾಧ್ಯಾಯ ಹೇಳಿದ್ದಾರೆ.

ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಮಂಡಳಿ ಜತೆಗೆ ಶಿಯಾ ವಕ್ಫ್ ಮಂಡಳಿಯೂ ಈ ಜಮೀನು ತಮಗೆ ಸೇರಿದ್ದೆಂದು ಕೋರ್ಟಿನಲ್ಲಿ ವಾದ ಮಂಡಿಸುತ್ತಿತ್ತು.

ಇಮಾಮ್-ಎ-ಹಿಂದ್ ಎಂಬುದು, ಅಲ್ಲಮ ಇಕ್ಬಾಲ್ ಎಂದೇ ಖ್ಯಾತರಾಗಿರುವ ಮುಸ್ಲಿಂ ಕವಿ ಸರ್ ಮುಹಮ್ಮದ್ ಇಕ್ಬಾಲ್ ಅವರು ಶ್ರೀರಾಮನಿಗೆ ಕೊಟ್ಟ ಬಿರುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT