ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NEET ಪರೀಕ್ಷೆಯನ್ನು ಖಂಡಿತವಾಗಿಯೂ ತೆಗೆದುಹಾಕುತ್ತೇವೆ: ತ.ನಾಡು ಸಿಎಂ ಸ್ಟಾಲಿನ್‌

Published 14 ಆಗಸ್ಟ್ 2023, 5:11 IST
Last Updated 14 ಆಗಸ್ಟ್ 2023, 5:11 IST
ಅಕ್ಷರ ಗಾತ್ರ

ಚೆನ್ನೈ: ‘ನಿಮ್ಮ ಗುರಿಗೆ ತೊಡಕಾಗಿರುವ ನೀಟ್‌ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದು ಹಾಕುತ್ತೇವೆ’ ಎಂದು ವಿದ್ಯಾರ್ಥಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಅಭಯ ನೀಡಿದ್ದಾರೆ.

ರಾಜ್ಯದ ಕ್ರೋಮ್‌ಪೇಟ್‌ನಲ್ಲಿ ನೀಟ್‌ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದಾರೆ.

‘ಯಾರೂ ಕೂಡ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾನು ವಿದ್ಯಾರ್ಥಿಗಳೊಂದಿಗೆ ಮನವಿ ಮಾಡುತ್ತೇನೆ. ನಿಮ್ಮ ಗುರಿಗೆ ತೊಡಕಾಗಿರುವ ನೀಟ್‌ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದುಹಾಕುತ್ತೇವೆ. ತಮಿಳುನಾಡು ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ’ ಎನ್ನುವ ಅವರ ಹೇಳಿಕೆಯನ್ನು ‘ಎಎನ್‌ಐ’ ಸುದ್ದಿ ಸಂಸ್ಥೆ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.

‘ನೀಟ್‌ ಅಭ್ಯರ್ಥಿ ಜಗದೀಶ್ವರನ್, ಆತ್ಮಹತ್ಯೆ ಮಾಡಿಕೊಂಡಿದ್ದು ಕೇಳಿ ನನಗೆ ಆಶ್ಚರ್ಯವಾಯಿತು. ಅವರ ಪೋಷಕರನ್ನು ಸಮಾಧಾನ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಅವರ ತಂದೆ ಸೆಲ್ವಶೇಖರ್‌ ಕೂಡ ಆತ್ಮಹತ್ಯೆ ಮಾಡಿಕೊಂಡರು. ಜಗದೀಶ್ವರನ್ ಅವರ ಕುಟುಂಬ, ಸ್ನೇಹಿತ ವರ್ಗ ಹಾಗೂ ಬಂಧು ಬಳಗಕ್ಕೆ ಹೇಗೆ ಸಾಂತ್ವನ ಹೇಳುವುದು ಎಂದು ನನಗೆ ತಿಳಿಯತ್ತಿಲ್ಲ. ವೈದ್ಯನಾಗುವ ಆಸೆ ಕಂಡಿದ್ದ ಬುದ್ದಿವಂತ ವಿದ್ಯಾರ್ಥಿಯೊಬ್ಬ ನೀಟ್‌ನಿಂದ ಆತ್ಮಹತ್ಯೆ ಮಾಡಿಕೊಂಡವರ ಸಾಲಿಗೆ ಸೇರಿದ್ದು ದುರಂತ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT