ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಬಂ. ಫಲಿತಾಂಶ: 3 ಸ್ಥಾನಗಳಿಂದ ಪ್ರಧಾನ ಪ್ರತಿಪಕ್ಷ ಸ್ಥಾನಕ್ಕೇರಿದ ಬಿಜೆಪಿ

Last Updated 2 ಮೇ 2021, 13:42 IST
ಅಕ್ಷರ ಗಾತ್ರ

ಕೋಲ್ಕತ್ತ: ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತಿದೆ, ಗೆದ್ದ ಪ್ರಮುಖರು ಯಾರು, ಸೋತ ಪ್ರಮುಖರು ಯಾರು, ಯಾವ ಕ್ಷೇತ್ರದ ಜನ ಯಾರಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ? ಮುಖ್ಯಾಂಶಗಳು ಮತ್ತು ಫಲಿತಾಂಶದ ಲೇಟೆಸ್ಟ್ ಅಪ್‌ಡೇಟ್ಸ್ ಇಲ್ಲಿವೆ.

ಎಡಪಂಥದ ನಾಡಲ್ಲಿ 3 ಸ್ಥಾನಗಳಿಂದ ಪ್ರಧಾನ ಪ್ರತಿಪಕ್ಷ ಸ್ಥಾನಕ್ಕೇರಿದ ಬಿಜೆಪಿ: ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಧಾನ ವಿರೋಧ ಪಕ್ಷ ಸ್ಥಾನಕ್ಕೆ ಬಡ್ತಿಪಡೆದಿದೆ. ಕಳೆದ ಸಲ 3 ಸ್ಥಾನಗಳನ್ನು ಗೆದಿದ್ದ ಬಿಜೆಪಿ ಈ ಸಲ 71 ಸ್ಥಾನ ಪಡೆದಿದೆ

* ರಾಜ್ಯ ಗೆದ್ದರೂ ಶಿಷ್ಯನೆದುರು ಸೋಲುಂಡ ಮಮತಾ ಬ್ಯಾನರ್ಜಿ: ಮಮತಾ ನಂದಿಗ್ರಾಮದಲ್ಲಿ 1622 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಆದಾಗ್ಯೂ ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ ಇದ್ದು ಮತ ಎಣಿಕೆ ಪೂರ್ಣವಾದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ.

*ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಭೇರಿ ಬಾರಿಸಿತು ಎಂದು ಬಿಜೆಪಿ ಹೇಳಿದೆ. ‘ರಾಜ್ಯದಲ್ಲಿ ಪಕ್ಷವು ಸೋಲಲು ಏನು ಕಾರಣಗಳು ಎನ್ನುವ ಬಗ್ಗೆ ಆತ್ಮವಿಮರ್ಶೆ ಮಾಡಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯಾ ತಿಳಿಸಿದ್ದಾರೆ.

*ಪಶ್ಚಿಮ ಬಂಗಾಳದಲ್ಲಿ ಅಕ್ಷರಶಃ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಲಕಚ್ಚಿವೆ. ವಿಧಾನಸಭೆ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲಾಗದೆ ಎರಡೂ ಪಕ್ಷಗಳು ಭಾರೀ ಆಘಾತ ಅನುಭವಿಸಿವೆ. ಟಿಎಂಸಿ, ಬಿಜೆಪಿ ಅಬ್ಬರದ ನಡುವೆ ಕಾಂಗ್ರೆಸ್, ಎಡಪಕ್ಷಗಳ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದಾರೆ.

* ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ಸಂಜೆ ವೇಳೆಗೆ ಟಿಎಂಸಿ 212, ಬಿಜೆಪಿ 78 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಆದರೆ, ಫಲಿತಾಂಶದ ಪಟ್ಟಿಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸುಳಿವೇ ಇಲ್ಲ. ಎಡಪಕ್ಷವೂ ಸಹ ಕೇವಲ ಏಕೈಕ ಕ್ಷೇತ್ರದಲ್ಲಿ ಮುನ್ನಡೆ ಹಿನ್ನಡೆ ಪಡೆಯುತ್ತಿದ್ದು, ಎರಡೂ ಪಕ್ಷಗಳು ಧೂಳೀಪಟವಾಗಿವೆ.

*‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಹುಲಿ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ. ’ಮಮತಾ ಅವರನ್ನು ಸೋಲಿಸುವುದು ಸುಲಭವಲ್ಲ. ಮಮತಾ ಅವರನ್ನು ಸೋಲಿಸಲು ಬಿಜೆಪಿ ಬಹಳ ಶ್ರಮಪಟ್ಟಿತು. ಅಪಾರ ಹೂಡಿಕೆ ಮಾಡಿತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT